×
Ad

ಇಸ್ರೇಲ್‌ನಲ್ಲಿ ಫೆಲೆಸ್ತೀನೀಯರಿಂದ ಗುಂಡು ಹಾರಾಟ: 4 ಸಾವು

Update: 2016-06-09 20:20 IST

ಜೆರುಸಲೇಂ, ಜೂ. 9: ಟೆಲ್ ಅವೀವ್‌ನಲ್ಲಿ ಗುಂಡು ಹಾರಾಟ ನಡೆದ ಹಿನ್ನೆಲೆಯಲ್ಲಿ, ಮುಸ್ಲಿಮರ ಪವಿತ್ರ ಮಾಸ ರಮಝಾನ್ ವೇಳೆ 83,000 ಫೆಲೆಸ್ತೀನೀಯರಿಗೆ ನೀಡಲಾಗಿರುವ ಪ್ರವೇಶ ಪರ್ಮಿಟ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಇಸ್ರೇಲ್ ಗುರುವಾರ ಹೇಳಿದೆ.
ಗುಂಡು ಹಾರಾಟದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

‘‘ರಮಝಾನ್‌ಗಾಗಿ ನೀಡಿರುವ ಎಲ್ಲ ಪರ್ಮಿಟ್‌ಗಳನ್ನು, ಅದರಲ್ಲೂ ವಿಶೇಷವಾಗಿ ಜೂಡಿಯ ಮತ್ತು ಸಮೇರಿಯಗಳ ಜನರ ಕೌಟುಂಬಿಕ ಇಸ್ರೇಲ್ ಭೇಟಿಗಾಗಿ ನೀಡಲಾಗಿರುವ ಪರ್ಮಿಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ’’ ಎಂದು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ನಾಗರಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಇಲಾಖೆ ಸಿಒಜಿಎಟಿ ನೀಡಿದ ಹೇಳಿಕೆಯೊಂದು ತಿಳಿಸಿದೆ.

ಇಸ್ರೇಲ್‌ನ ಸೇನಾ ಪ್ರಧಾನ ಕಚೇರಿ ಸಮೀಪದಲ್ಲಿರುವ ಜನಪ್ರಿಯ ಟೆಲ್‌ಅವೀವ್ ನೈಟ್ ಕ್ಲಬ್ ಒಂದರಲ್ಲಿ ಬುಧವಾರ ತಡ ರಾತ್ರಿ ಇಬ್ಬರು ಫೆಲೆಸ್ತೀನೀಯರು ಗುಂಡು ಹಾರಾಟ ನಡೆಸಿದ ಬಳಿಕ ಸಿಒಜಿಎಟಿ ಈ ಕ್ರಮ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News