×
Ad

ಬಗ್ದಾದ್: 2 ಸ್ಫೋಟಗಳಲ್ಲಿ ಕನಿಷ್ಠ 22 ಸಾವು

Update: 2016-06-09 22:41 IST

ಬಗ್ದಾದ್, ಜೂ. 9: ಬಗ್ದಾದ್‌ನಲ್ಲಿ ಗುರುವಾರ ನಡೆದ ಎರಡು ಪ್ರತ್ಯೇಕ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ 22ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 70 ಮಂದಿ ಗಾಯಗೊಂಡಿದ್ದಾರೆ.
ಒಂದು ಬಾಂಬ್ ವ್ಯಾಪಾರ ಕೇಂದ್ರವೊಂದರಲ್ಲಿ ನಡೆದರೆ, ಇನ್ನೊಂದನ್ನು ಸೇನಾ ತಪಾಸಣಾ ಠಾಣೆಯ ಮೇಲೆ ಗುರಿಯಿರಿಸಲಾಗಿತ್ತು ಎಂದು ಇರಾಕ್ ಪೊಲೀಸರು ತಿಳಿಸಿದರು.
ಫಲೂಜಾ ನಗರದಿಂದ ಐಸಿಸ್ ಉಗ್ರರನ್ನು ಹೊಡೆದೋಡಿಸಲು ಇರಾಕ್ ಪಡೆಗಳು ಪ್ರಯತ್ನಿಸುತ್ತಿರು ವಂತೆಯೇ ಈ ದಾಳಿಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News