×
Ad

26/11 ದಾಳಿಯ ಸಾಕ್ಷಚಿತ್ರ ಸರಕಾರದ ನಿಲುವಲ್ಲ: ಚೀನಾ

Update: 2016-06-10 22:50 IST

ಬೀಜಿಂಗ್, ಜೂ. 10: ಮುಂಬೈ ಮೇಲೆ ಪಾಕಿಸ್ತಾನದ ಉಗ್ರಗಾಮಿಗಳು ನಡೆಸಿದ ದಾಳಿಯ ಬಗ್ಗೆ ಚೀನಾದ ಸರಕಾರಿ ಟಿವಿ ಚಾನೆಲ್ ಚೀನಾ ಸೆಂಟ್ರಲ್ ಟೆಲಿವಿಶನ್ ಪ್ರಸಾರ ಮಾಡಿದ ಸಾಕ್ಷಚಿತ್ರವು ಚೀನಾ ಸರಕಾರದ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಚೀನಾ ಗುರುವಾರ ತಿಳಿಸಿದೆ.
ಆ ಸಾಕ್ಷಚಿತ್ರವನ್ನು ಅಮೆರಿಕದ ಸಂಸ್ಥೆಯೊಂದು ನಿರ್ಮಿಸಿದ್ದು, ಅದನ್ನು ಚೀನಾ ಭಾಷೆಗೆ ಅನುವಾದಿಸಲಾಗಿತ್ತು ಎಂದು ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶ ಸಚಿವಾಲಯದ ವಕ್ತಾರೆ ಹಾಂಗ್ ಲೀ ತಿಳಿಸಿದರು.
‘‘ಭಯೋತ್ಪಾದನೆಯ ವಿರುದ್ಧದ ಚೀನಾದ ನಿಲುವು ಬದಲಾಗಿಲ್ಲ’’ ಎಂದು ಹಾಂಗ್ ಹೇಳಿದರಾದರೂ ಹೆಚ್ಚಿನ ವಿವರಣೆ ನೀಡಲಿಲ್ಲ.
2008ರ ಮುಂಬೈ ದಾಳಿಯನ್ನು ನಡೆಸಿದ್ದು ಲಷ್ಕರೆ ತಯೀಬ ಎಂದು ಸಾಕ್ಷಚಿತ್ರ ಹೇಳುತ್ತದೆ ಹಾಗೂ ದಾಳಿಯ ವೇಳೆ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್‌ನ ತಪ್ಪೊಪ್ಪಿಗೆ ಹೇಳಿಕೆಯನ್ನು ಟಿವಿ ಪ್ರಸಾರ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News