×
Ad

ಮೋದಿಯ ಭಾರತ-ಅಮೆರಿಕ ಕಲ್ಪನೆ ‘ಮೋದಿ ಸಿದ್ಧಾಂತ’ ಎಂದ ಅಮೆರಿಕ

Update: 2016-06-10 22:54 IST

ವಾಶಿಂಗ್ಟನ್, ಜೂ. 10: ಪ್ರಧಾನಿ ನರೇಂದ್ರ ಮೋದಿಯ ಅಮೆರಿಕ ಪ್ರವಾಸವನ್ನು ಒಬಾಮ ಆಡಳಿತ ‘‘ಐತಿಹಾಸಿಕ’’ ಎಂಬುದಾಗಿ ಬಣ್ಣಿಸಿದೆ ಹಾಗೂ ‘‘ಇತಿಹಾಸದ ಹಿಂಜರಿಕೆ’’ಗಳನ್ನು ಮೆಟ್ಟಿನಿಂತ ಹಾಗೂ ಜಾಗತಿಕ ನೆಮ್ಮದಿಗಾಗಿ ಶ್ರಮಿಸುವ ಭಾರತ-ಅಮೆರಿಕ ಬಾಂಧವ್ಯಕ್ಕೆ ಸಂಬಂಧಿಸಿದ ಮೋದಿ ಕಲ್ಪನೆಯನ್ನು ‘‘ಮೋದಿ ಸಿದ್ಧಾಂತ’’ ಎಂಬುದಾಗಿ ಬಣ್ಣಿಸಿದೆ.
‘‘ನನಗನಿಸುವಂತೆ ಈ ಭೇಟಿಯ ಪ್ರಮುಖ ಫಲಿತಾಂಶವೆಂದರೆ, ಅಮೆರಿಕದ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಪ್ರಧಾನಿ ಮೋದಿ ತನ್ನ ಮನಸ್ಸನ್ನು ಸ್ಪಷ್ಟವಾಗಿ ತೆರೆದಿಟ್ಟದ್ದು’’ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಸಹಾಯಕ ವಿದೇಶಾಂಗ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್ ಹೇಳಿದರು.
‘‘ಮೋದಿ ಸಿದ್ಧಾಂತ ಎಂಬುದಾಗಿ ನಾನು ಇದನ್ನು ಕರೆಯುತ್ತೇನೆ. ಇದು ಇತಿಹಾಸದ ಹಿಂಜರಿಕೆಗಳನ್ನು ಮೆಟ್ಟಿ ನಿಲ್ಲುವ ಹಾಗೂ ನಮ್ಮ ಪರಸ್ಪರ ಹಿತಾಸಕ್ತಿಗಳನ್ನು ಒಗ್ಗೂಡಿಸುವ ವಿದೇಶ ನೀತಿಯಾಗಿದೆ’’ ಎಂದು ವಾಶಿಂಗ್ಟನ್ ಆಡಿಯನ್ಸ್‌ನಲ್ಲಿ ಬಿಸ್ವಾಲ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News