ಕಚ್ಚಾಟದ ಲಾಭ ಯಾರಿಗೆ?
Update: 2016-06-10 23:50 IST
ಮಾನ್ಯರೆ,
ಒಂದಷ್ಟು ಕಾಲ ಬೂದಿ ಮುಚ್ಚಿದ ಕೆಂಡದಂತಿದ್ದ ದ.ಕ. ಕಾಂಗ್ರೆಸ್‌ನ ಬಣ ರಾಜಕೀಯದ ಜಗಳ ಈಗ ಮತ್ತೆ ತಾರಕಕ್ಕೇರುವಂತೆ ಕಾಣುತ್ತಿದೆ.
ಜಿಲ್ಲೆಯಲ್ಲಿ ಇಬ್ಬರು ಪ್ರತಿಷ್ಠಿತ ನಾಯಕರ ಹಿಂಬಾಲಕರು ಹಿಂದೆಯೂ ಹಲವಾರು ಬಾರಿ ಬಹಿರಂಗವಾಗಿ ಕಚ್ಚಾಡಿಕೊಂಡ ಪರಿಣಾಮವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಮಾವಶೇಷ ಗೊಂಡಿತ್ತು. ಆನಂತರ ಬುದ್ಧಿ ಕಲಿತು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಕಾರಣ ಜಿಲ್ಲೆಯಲ್ಲಿ ಹಲವು ಶಾಸಕರು ಗೆದ್ದು ಬರುವಂತಾಯ್ತು. ಆದರೆ ಈಗ ಮತ್ತೆ ಹಿಂದಿನ ಚಾಳಿ ಆರಂಭಗೊಂಡಿದೆ. ಎತ್ತಿನ ಹೊಳೆ ಯೋಜನೆಯ ಪರ-ವಿರೋಧದ ಕಾರಣವಾಗಿ ಆರಂಭಗೊಂಡ ಈ ಕಚ್ಚಾಟ ಈಗ ಎಲ್ಲಿಗೆ ಮುಟ್ಟುತ್ತದೆಯೆಂದು ಹೇಳುವ ಹಾಗಿಲ್ಲ.
ಮೊದಲು ಕಾಂಗ್ರೆಸ್‌ನ ಜಿಲ್ಲೆಯ ಎಲ್ಲ ನಾಯಕರು ಈ ಕಚ್ಚಾಟದಿಂದ ಯಾರಿಗೆ ಲಾಭವೆಂದು ಅರ್ಥಮಾಡಿಕೊಂಡರೆ ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಉಳಿಗಾಲವಿದೆ. ಇಲ್ಲದಿದ್ದರೆ...?