×
Ad

ವಿವಾದಾಸ್ಪದ ಸಮುದ್ರದಲ್ಲಿ ಸುನಾಮಿ ಬುರುಡೆಗಳನ್ನು ಇಡಲು ಚೀನಾ ಮುಂದು

Update: 2016-06-11 19:44 IST

ಬೀಜಿಂಗ್, ಜೂ. 11: ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರ ಮತ್ತು ರಯುಕು ಟ್ರೆಂಚ್ ಮತ್ತು ತೈವಾನ್ ದ್ವೀಪದ ಪೂರ್ವದ ಜಲಪ್ರದೇಶಗಳಲ್ಲಿ ಸುನಾಮಿ ಮುನ್ನೆಚ್ಚರಿಕೆ ತೇಲುಬುರುಡೆಗಳನ್ನು ಸ್ಥಾಪಿಸಲು ಚೀನಾ ನಿರ್ಧರಿಸಿದೆ. ಈ ವಿವಾದಾಸ್ಪದ ವಲಯದ ಮೇಲಿನ ತನ್ನ ನಿಯಂತ್ರಣವನ್ನು ಬಿಗಿಗೊಳಿಸಲು ಅದು ಈ ಕ್ರಮಕ್ಕೆ ಮುಂದಾಗಿದೆ.

ಈ ಸುನಾಮಿ ತೇಲುಬುರುಡೆಗಳನ್ನು ಅಂತಾರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ಜಾಲಗಳಿಗೆ ಜೋಡಿಸಲಾಗುವುದು ಹಾಗೂ ಇದರಿಂದ ಚೀನಾದ ಪೂರ್ವ ಮತ್ತು ದಕ್ಷಿಣ ಕರಾವಳಿ ಪ್ರದೇಶಗಳು ಮತ್ತು ಸಮೀಪದ ದೇಶಗಳಿಗೆ ಸುನಾಮಿ ಮುನ್ನೆಚ್ಚರಿಕೆ ಲಭಿಸುವುದು ಎಂದು ಸ್ಟೇಟ್ ಓಶಾನಿಕ್ ಅಡ್ಮಿನಿಸ್ಟ್ರೇಶನ್‌ನ ಸುನಾಮಿ ಎಚ್ಚರಿಕೆ ಕೇಂದ್ರದ ನಿರ್ದೇಶಕ ಯುವಾನ್ ಯೆ ಹೇಳಿದರು.

ಕೆಲವು ತೇಲುಬುರುಡೆಗಳನ್ನು ಮನಿಲಾ ಟ್ರೆಂಚ್‌ನ ಪಶ್ಚಿಮದಲ್ಲಿ ಸ್ಥಾಪಿಸಲಾಗಿದೆ.

ತಾನು ತೆಗೆದುಕೊಂಡಿರುವ ಇಂಥ ಕ್ರಮಗಳು ಪ್ರಾಕೃತಿಕ ವಿಪತ್ತುಗಳನ್ನು ನಿಭಾಯಿಸಲು ಈ ವಲಯದಲ್ಲಿರುವ ದೇಶಗಳಿಗೆ ನೆರವಾಗುತ್ತವೆ ಎಂದು ಚೀನಾ ಹೇಳಿಕೊಂಡಿದೆ.

ಇಡೀ ದಕ್ಷಿಣ ಚೀನಾ ಸಮುದ್ರ ತನ್ನದೆಂದು ಚೀನಾ ಹೇಳಿಕೊಳ್ಳುತ್ತಿದೆ. ಆದರೆ, ಅದರಲ್ಲಿ ತಮ್ಮ ಪಾಲೂ ಇದೆ ಎಂದು ವಿಯೆಟ್ನಾಂ, ಫಿಲಿಪ್ಪೀನ್ಸ್, ಮಲೇಶ್ಯ, ಬ್ರೂನೈ ಮತ್ತು ತೈವಾನ್ ದೇಶಗಳು ಹೇಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News