×
Ad

ಚಾಂಪಿಯನ್ಸ್ ಟ್ರೋಫಿ: ಭಾರತಕ್ಕೆ ಜಯ

Update: 2016-06-11 23:38 IST

ಲಂಡನ್, ಜೂ.11: ಸಿಂಗ್‌ದ್ವಯರಾದ ಮನ್‌ದೀಪ್ ಹಾಗೂ ಹರ್ಮನ್‌ಪ್ರೀತ್ ಬಾರಿಸಿದ ತಲಾ ಒಂದು ಗೋಲು, ಅಂತಿಮ ಕ್ಷಣದಲ್ಲಿ ಉತ್ತಮ ಗೋಲ್‌ಕೀಪಿಂಗ್ ನಡೆಸಿದ ನಾಯಕ ಪಿ.ಆರ್.ಶ್ರೀಜೇಶ್ ನೆರವಿನಿಂದ ಭಾರತ ತಂಡ ಆತಿಥೇಯ ಬ್ರಿಟನ್ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿದೆ.

 ಶನಿವಾರ ಇಲ್ಲಿ ನಡೆದ ಕೂಟದ 2ನೆ ಪಂದ್ಯದಲ್ಲಿ ಭಾರತದ ಪರ ಮನ್‌ದೀಪ್(17ನೆ ನಿಮಿಷ) ಹಾಗೂ ಹರ್ಮನ್‌ಪ್ರೀತ್(34ನೆ ನಿ.) ತಲಾ 1 ಗೋಲು ಬಾರಿಸಿದರು. ಇಂಗ್ಲೆಂಡ್‌ನ ಪರ ಅಶ್ಲೇ ಜಾಕ್ಸನ್(35ನೆ ನಿ.) ಏಕೈಕ ಗೋಲು ಬಾರಿಸಿದರು.

ಶುಕ್ರವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಜರ್ಮನಿಯ ವಿರುದ್ಧ 3-3 ಅಂತರದಿಂದ ಡ್ರಾ ಸಾಧಿಸಿದ್ದ ಭಾರತ ಇದೀಗ ಗೆಲುವಿನ ಖಾತೆೆ ತೆರೆದಿದೆ. ಬ್ರಿಟನ್ 57ನೆ ನಿಮಿಷದಲ್ಲಿ ಗೋಲು ಬಾರಿಸಿ ಡ್ರಾ ಸಾಧಿಸಲು ಯತ್ನಿಸಿತ್ತು. ಆದರೆ ಗೋಲ್‌ಕೀಪರ್ ಶ್ರೀಜೇಶ್ ಈ ಪ್ರಯತ್ನವನ್ನು ವಿಫಲಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News