ಸ್ಟಟ್‌ಗರ್ಟ್ ಮಾಸ್ಟರ್ಸ್ ಟೂರ್ನಿ: ಫೆಡರರ್‌ಗೆ ಡೊಮಿನಿಕ್ ಶಾಕ್
Update: 2016-06-11 23:43 IST
ಸ್ಟಟ್‌ಗರ್ಟ್, ಜೂ.11: ಅಗ್ರ ಶ್ರೇಯಾಂಕದ ರೋಜರ್ ಫೆಡರರ್‌ಗೆ ಶಾಕ್ ನೀಡಿದ ಡೊಮಿನಿಕ್ ಥಿಯೆಮ್ ಸ್ಟಟ್‌ಗರ್ಟ್ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಇತ್ತೀಚೆಗೆ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿ ಎಟಿಪಿ ರ್ಯಾಂಕಿಂಗ್‌ನಲ್ಲಿ 10ನೆ ಸ್ಥಾನ ತಲುಪಿದ್ದ ಡೊಮಿನಿಕ್ ಶನಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಫೆಡರರ್‌ರನ್ನು 3-6, 7-6(9/7), 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಕಳೆದ ತಿಂಗಳು ರೋಮ್ ಓಪನ್‌ನಲ್ಲಿ ಸ್ವಿಸ್ ಆಟಗಾರ ಫೆಡರರ್‌ರನ್ನು ಮಣಿಸಿದ್ದ ಡೊಮಿನಿಕ್ ಮತ್ತೊಮ್ಮೆ ಗೆಲುವು ಸಾಧಿಸಿದರು.
ಈ ವರ್ಷ ನಾಲ್ಕನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ 3ನೆ ಶ್ರೇಯಾಂಕದ ಡೊಮಿನಿಕ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಎದುರಿಸಲಿದ್ದಾರೆ.