×
Ad

ಜಿಶಾ ಕೊಲೆ ಪ್ರಕರಣ: ಕಸ್ಟಡಿ ಪಡೆದ ವ್ಯಕ್ತಿ ಆಸ್ಪತ್ರೆಗೆ ದಾಖಲು!

Update: 2016-06-12 11:12 IST

 ತೊಡುಪುಝ, ಜೂನ್ 12: ಜಿಶಾ ಕೊಲೆಪ್ರಕರಣಕ್ಕೆ ಸಂಬಂಧಿಸಿ ಇಡುಕ್ಕಿ ವೆಣ್‌ಮಣಿಯಿಂದ ಕಸ್ಟಡಿಗೆ ಪಡೆದ ಯುವಕನನ್ನು ತೊಡುಪುಝ ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪೊಲೀಸರ ಹೊಡೆತದಿಂದ ಬಲಕೈ ಹಾಗೂ ಸೊಂಟಕ್ಕೆ ಪೆಟ್ಟಾಗಿದೆ ಎಂದು ಆರೋಪಿಸಿ ಮೂವಾಟ್ಟುಪುಝದ ಮಣಿಕಂಠನ್ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕುಂಞಿಕುಝಿ ಪೊಲೀಸರು ತನ್ನ ಮೇಲೆ ದೌರ್ಜನ್ಯ ವೆಸಗಿದ ಬಳಿಕ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದರು, ತನಿಖಾ ತಂಡ ಪ್ರಶ್ನಿಸಿದ ಬಳಿಕ ಬಿಟ್ಟು ಕಳುಹಿಸಿತು ಎಂದು ಮಣಿಕಂಠನ್ ಹೇಳಿದ್ದಾರೆ. ಆನಂತರ ತೊಡುಪುಝ ಆಸ್ಪತ್ರೆಗೆ ಸೇರಿದ್ದಾರೆ. ಆದರೆ ಮಣಿಕಂಠನ್‌ರ ದೇಹದಲ್ಲಿ ಹೊಡೆತ ಬಿದ್ದುದನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಕಳೆದ ಬುಧವಾರ ಮಣಿಕಂಠನ್‌ರನ್ನು ಸಂಶಯದಲ್ಲಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಜಿಶಾ ಕೊಲೆಪಾತಕಿಯ ರೇಖಾ ಚಿತ್ರಕ್ಕೆ ಹೋಲಿಕೆ ಇದ್ದುದರಿಂದ ಅವರನ್ನು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News