ಶಾಂಘಾ: ವಿಮಾನ ನಿಲ್ದಾಣದಲ್ಲಿ ಸ್ಫೋಟ; 4 ಬಲಿ
Update: 2016-06-12 22:44 IST
ಬೀಜಿಂಗ್,ಜೂ.12: ಚೀನಾದ ವಾಣಿಜ್ಯ ನಗರ ಶಾಂಘಾನ ಮುಖ್ಯ ವಿಮಾನ ನಿಲ್ದಾಣದಲ್ಲಿ ರವಿವಾರ ನಡೆದ ಬಾಂಬ್ ಸ್ಫೋಟದಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು, ಇತರ ಮೂವರಿಗೆ ಗಾಯಗಳಾಗಿವೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 2:20ರ ಸುಮಾರಿಗೆ ಶಾಂಘಾನ ಪುಡೊಂಗ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಟರ್ಮಿನಲ್ ಸಂಖ್ಯೆ 2ರ, ಪ್ರಯಾಣಿಕರ ಚೆಕ್‌ಇನ್ ಕೌಂಟರ್‌ನಲ್ಲಿ ನಾಡಬಾಂಬೊಂದು ಸ್ಫೋಟಿಸಿದೆಯೆಂದು ಸರಕಾರಿ ಸ್ವಾಮ್ಯದ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಸ್ಫೋಟದಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಅದು ಹೇಳಿದೆ.