×
Ad

ಜುಡಿತ್ ಸುಳಿವು ಇನ್ನೂ ಅಲಭ್ಯ

Update: 2016-06-12 22:54 IST

ಕಾಬೂಲ್, ಜೂ.12: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಹೊರವಲಯದಲ್ಲಿ ಗುರುವಾರ ಸಂಜೆ ಶಂಕಿತ ಉಗ್ರರಿಂದ ನಾಪತ್ತೆಯಾದ ಭಾರತೀಯ ಮಹಿಳೆ ಜೂಡಿತ್ ಡಿಸೋಝಾ ಬಗ್ಗೆ ಈತನಕ ಯಾವುದೇ ಸುಳಿವು ಲಭ್ಯವಾಗಿಲ್ಲವೆಂದು ತಿಳಿದುಬಂದಿದೆ. ಜೂಡಿತ್ ರಕ್ಷಣೆಗಾಗಿ ಅಫ್ಘಾನ್ ಅಧಿಕಾರಿಗಳು ತೀವ್ರ ಪ್ರಯತ್ನವನ್ನು ಮುಂದುವರಿಸಿರುವುದಾಗಿ ತಿಳಿದುಬಂದಿದೆ.
   ಆಘಾ ಖಾನ್ ಪ್ರತಿಷ್ಠಾನದಲ್ಲಿ ಹಿರಿಯ ತಾಂತ್ರಿಕ ಸಲಹೆಗಾರರಾದ ಜೂಡಿತ್ ಡಿಸೋಜಾ ಕಾಬೂಲ್‌ನ ತಾಯ್‌ಮನಿ ಪ್ರದೇಶದಲ್ಲಿರುವ ತನ್ನ ಕಚೇರಿಯ ಬಳಿ ಇನ್ನಿಬ್ಬರೊಂದಿಗೆ ಅಪಹರಿಸಲ್ಪಟ್ಟಿದ್ದರು
40 ವರ್ಷದ ಜೂಡಿತ್‌ರ ಬಂಧಮುಕ್ತಿಗಾಗಿ, ಅಫ್ಘಾನ್ ಅಧಿಕಾರಿಗಳ ಜೊತೆ ನಿಕಟ ಸಂಪರ್ಕದಲ್ಲಿರುವುದಾಗಿ ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. ಈವರೆಗೆ ಯಾವುದೇ ಸಂಘಟನೆ ಕೂಡಾ ಜೂಡಿತ್ ಅವರ ಅಪಹರಣದ ಹೊಣೆಯನ್ನು ಹೊತ್ತುಕೊಂಡಿಲ್ಲ. ಅಗಾ ಖಾನ್ ಪ್ರತಿಷ್ಠಾನವು ಅಗಾ ಖಾನ್ ಅಭಿವೃದ್ಧಿ ನೆಟ್‌ವರ್ಕ್ ಸಂಸ್ಥೆಯ ಏಜೆನ್ಸಿಯಾಗಿದ್ದು, ಯುದ್ಧಗ್ರಸ್ತ ಅಫ್ಘಾನಿಸ್ತಾನದಲ್ಲಿ ಯೋಜನಾ ಕಾಮಗಾರಿಗಳ ಅನುಷ್ಠಾನದಲ್ಲಿ ಸರಕಾರಕ್ಕೆ ನೆರವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News