×
Ad

ಜಪಾನೀಯರು ರಮಝಾನ್ ತಿಂಗಳಿಡೀ ಉಪವಾಸ ಆಚರಿಸುವುದು ಏಕೆ ಗೊತ್ತೇ?

Update: 2016-06-13 17:13 IST

ಟೋಕಿಯೊ: ಹಲವು ಕಾರಣಗಳಿಗಾಗಿ ಜಪಾನ್ ವಿಶ್ವದಲ್ಲೇ ಅತ್ಯಂತ ವಿಶಿಷ್ಟ ದೇಶ. ಮುಖ್ಯವಾಗಿ ಬೌದ್ಧ ಧರ್ಮವನ್ನು ಇಲ್ಲಿನ ಜನರು ಅನುಸರಿಸುತ್ತಾರೆ. ಆದರೆ ಇಲ್ಲಿನ ಮುಸಲ್ಮಾನೇತರ ಜನ ಕೂಡಾ ಮುಸ್ಲಿಮರಂತೆ ರಮಝಾನ್ ತಿಂಗಳಿನಲ್ಲಿಡೀ ಉಪವಾಸ ಕೈಗೊಳ್ಳುತ್ತಾರೆ. ಆದರೆ ವಿಶ್ವದ ಎಲ್ಲೂ ಇಡೀ ತಿಂಗಳು ಹೀಗೆ ಮುಸಲ್ಮಾನೇತರರು ಉಪವಾಸ ಮಾಡುವುದು ಗೊತ್ತಿಲ್ಲ. ಜಪಾನ್ ನಲ್ಲಿ ಮುಸಲ್ಮಾನೇತರರು ತಿಂಗಳಿಡೀ ಉಪವಾಸ ಇರುವುದು ಏಕೆ ಎನ್ನುವುದು ಗೊತ್ತೇ?


ಬಹುಶಃ ನಿಖರವಾದ ಕಾರಣ ಅವರಿಗೂ ಗೊತ್ತಿಲ್ಲ. ಕುತೂಹಲಕ್ಕೆ ಇಬ್ಬರು ಜಪಾನಿ ಮಹಿಳೆಯರನ್ನು ಈ ಬಗ್ಗೆ ಪ್ರಶ್ನಿಸಿದಾಗ, ವಿಭಿನ್ನ ಉತ್ತರ ದೊರಕಿತು. ಮೊದಲ ಮಹಿಳೆ ಹೇಳಿದ ಪ್ರಕಾರ, ಆಕೆ ಕಳೆದ ವರ್ಷ ಅರೇಬಿಕ್ ಕಲಿಕೆ ಆರಂಭಿಸಿದರು. ಆಗ ಸಹಜವಾಗಿಯೇ ಕೆಲ ಅರಬ್ ಹಾಗೂ ಮುಸ್ಲಿಮರ ಪರಿಚಯವಾಯಿತು. ಕಳೆದ ರಮಝಾನ್ ನಲ್ಲಿ ಒಂದು ದಿನವಷ್ಟೇ ಉಪವಾಸ ಮಾಡಿದ್ದಳು. "ಅದು ತೀರಾ ಕಠಿಣ, ನಾನು ಹೃದಯಪೂರ್ವಕವಾಗಿ ಮಾಡಲು ಸಾಧ್ಯವಾಗಲಿಲ್ಲ" ಎಂದು ಹೇಳಿದಳು. ಈ ವರ್ಷ ಮುಸ್ಲಿಮರಂತೆ ಇಡೀ ತಿಂಗಳು ಉಪವಾಸ ಕೈಗೊಂಡಿದ್ದಾಳೆ. ಇದಕ್ಕೆ ಕಾರಣ, ಕಳೆದ ವರ್ಷ ಆಕೆ ಭೇಟಿ ಮಾಡಿದ ಇಬ್ಬರು ಮುಸ್ಲಿಮರು ತೀರಾ ಒಳ್ಳೆಯವರು. ಆದ್ದರಿಂದ ರಮಝಾನ್ ತಿಂಗಳಲ್ಲಿ ಅವರ ಸುರಕ್ಷತೆ ಹಾಗೂ ಸಂತೋಷಕ್ಕಾಗಿ ಪ್ರಾರ್ಥಿಸುವ ಸಲುವಾಗಿ ಉಪವಾಸ ಕೈಗೊಂಡಿದ್ದಾಗಿ ಆಕೆ ವಿವರಿಸಿದಳು. ಜತೆಗೆ ತನ್ನ ಮಗಳ ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥಿಸುವುದು ಕೂಡಾ ಉಪವಾಸದ ಉದ್ದೇಶ ಎಂದು ಹೇಳಿದಳು. ನಾನು ಮುಸ್ಲಿಂ ಸಮುದಾಯಕ್ಕೆ ಸೇರಿದವಳಲ್ಲ. ಎಂದೂ ಸೇರುವುದೂ ಇಲ್ಲ. ಆದರೆ ಖುರಾನ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಾರ್ಥನೆ ಕರೆ ಬಗ್ಗೆ ಕೇಳಿದ ಬಳಿಕ ನನ್ನ ಹೃದಯ ಹಗುರ ಎನಿಸುತ್ತದೆ ಎಂದು ಹೇಳಿದಳು.


ಮತ್ತೊಬ್ಬ ಮಹಿಳೆ ನೀಡಿದ ಉತ್ತರ ಹೀಗಿದೆ: "ನಾಲ್ಕು ವರ್ಷ ಹಿಂದೆ ನಾನು ಮುಸ್ಲಿಂ ವ್ಯಕ್ತಿಯೊಬ್ಬರನ್ನು ನಾನು ಭೇಟಿ ಮಾಡಿದೆ. ಸಾವಿನ ಬಗ್ಗೆ ನಾವು ಮಾತನಾಡಿದೆವು. ದುರದೃಷ್ಟವಶಾತ್ ಎಲ್ಲ ಜಪಾನೀಯರು ಮೃತದೇಹವನ್ನು ಕಾನೂನುಬದ್ದವಾಗಿ ಸುಡಬೇಕು. ಎಲ್ಲರಿಗೂ ಅದು ನರಕಯಾತನೆ ಎನ್ನುವುದು ನನ್ನ ನಂಬಿಕೆ. ಆದರೆ ಜಪಾನ್ ನಲ್ಲಿ  ಮುಸ್ಲಿಮರು ಮೃತಪಟ್ಟರೆ ದೇಹ ಸುಡಬೇಕಾಗಿಲ್ಲ ಎನ್ನುವುದು ನನಗೆ ತಿಳಿಯಿತು. ಆದ್ದರಿಂದ ಆ ಬಳಿಕ ನಾನು ಇಸ್ಲಾಂ ಬಗ್ಗೆಯೇ ಯೋಚಿಸುತ್ತೇನೆ. ಇದೀಗ ನಾನು ಹಂದಿ ತಿನ್ನುವುದಿಲ್ಲ; ಮದ್ಯಪಾನ ಮಾಡುವುದಿಲ್ಲ. ಆದರೆ ನಾನು ಮುಸಲ್ಮಾನೇತರರು ಖುರಾನ್ ಮುಟ್ಟಬಾರದು ಎಂದು ಹಲವು ಚಿಂತಕರು ಹೇಳಿರುವುದರಿಂದ ಅದನ್ನು ಮುಟ್ಟಿಲ್ಲ. ಫೋನ್ ಮೂಲಕ ಖುರಾನ್ ಕಲಿಯುತ್ತಿದ್ದೇನೆ" ಎಂದು ವಿವರಿಸಿದಳು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News