×
Ad

ಮೇವು ಹಗರಣ

Update: 2016-06-13 23:34 IST

ರಾಂಚಿ, ಜೂ.13: ಬಹುಕೋಟಿ ಮೇವು ಹಗರಣದ ಸಂಬಂಧ ಆರ್‌ಜೆಡಿ ಅಧ್ಯಕ್ಷ ಲಾಲುಪ್ರಸಾದ್ ಇಂದು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವೊಂದಕ್ಕೆ ಹಾಜರಾಗಿದ್ದಾರೆ.

ಡುಮ್ಕಾದ ಖಜಾನೆಯಿಂದ ಅನಧಿಕೃತವಾಗಿ ರೂ. 3.31 ಕೋಟಿ ತೆಗೆದಿರುವ ಪ್ರಕರಣಕ್ಕೆ ಸಂಬಂಧಿಸಿ ಲಾಲು ಸಹಿತ 38 ಮಂದಿ ಆರೋಪಿಗಳಿಗೆ ನ್ಯಾಯಾಲಯವು ಜೂ.2ರಂದು ಸಮನ್ಸ್ ಕಳುಹಿಸಿತ್ತು.
ಲಾಲು ರವಿವಾರ ಸಂಜೆ ಪಾಟ್ನಾದಿಂದ ರಾಂಚಿಗೆ ಬಂದಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಲಿದೆ.
ಮೇವು ಹಗರಣವೊಂದರಲ್ಲಿ ಲಾಲು ಅಪರಾಧಿಯೆಂದು ಈಗಾಗಲೇ ಘೋಷಣೆಯಾಗಿದ್ದು, 2013ರಲ್ಲಿ ಅವರಿಗೆ 5 ವರ್ಷಗಳ ಸಜೆ ವಿಧಿಸಲಾಗಿತ್ತು. ಪ್ರಸ್ತುತ ಅವರೀಗ ಜಾಮೀನಿನ ಮೇಲೆ ಹೊರಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News