×
Ad

ಐಎಎಫ್ ವಿಮಾನ ಕಟ್ಟಡಕ್ಕೆ ಢಿಕ್ಕಿ: ಚಾಲಕರು ಪಾರು

Update: 2016-06-13 23:36 IST

ಜೋಧ್‌ಪುರ, ಜೂ.13: ಭಾರತೀಯ ವಿಮಾನ ದಳದ(ಐಎಎಫ್) ಮಿಗ್-27 ವಿಮಾನವೊಂದು ಇಂದು ರಾಜಸ್ಥಾನದ ಜೋಧ್‌ಪುರದಲ್ಲಿ ಕಟ್ಟಡವೊಂದಕ್ಕೆ ಅಪ್ಪಳಿಸಿದೆ. ಆದಾಗ್ಯೂ, ಪೈಲಟ್‌ಗಳಿಬ್ಬರೂ ಅದೃಷ್ಟವಶಾತ್ ಪಾರಾಗಿದ್ದಾರೆ. ಕನಿಷ್ಠ ಇಬ್ಬರಿಗೆ ಗಾಯಗಳಾಗಿವೆ.

ಯುದ್ಧ ವಿಮಾನದ ಮಾಮೂಲು ಹಾರಾಟದ ವೇಳೆ ಜೋಧ್‌ಪುರದ ವಾಯುನೆಲೆಯ ಬಳಿ ಈ ಅಪಘಾತ ಸಂಭವಿಸಿವೆ.
ವಾಯುಪಡೆಯು ಘಟನೆಯ ಕುರಿತು ತನಿಖೆಯೊಂದಕ್ಕೆ ಆದೇಶಿಸಿದೆಯೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಿಗ್-27 ಐಎಎಫ್‌ನಲ್ಲಿರುವ ಅತ್ಯಂತ ಹಳೆಯ ವಿಮಾನಗಳಾಗಿದ್ದು, ಅವುಗಳನ್ನು ಶೀಘ್ರವೇ ನಿವೃತ್ತಿಗೊಳಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News