ಯುರೋ 2016: ಸ್ಪೇನ್ ಶುಭಾರಂಭ
Update: 2016-06-13 23:45 IST
ಪ್ಯಾರಿಸ್, ಜೂ.13: ಗೆರಾರ್ಡ್ ಪಿಕ್ಯೂ ಅಂತಿಮ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲು ಸಹಾಯದಿಂದ ಹಾಲಿ ಚಾಂಪಿಯನ್ ಸ್ಪೇನ್ ತಂಡ ಝೆಕ್ ಗಣರಾಜ್ಯ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ ಶುಭಾರಂಭ ಮಾಡಿದೆ.
ಸೋಮವಾರ ಇಲ್ಲಿ ನಡೆದ ಡಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಸ್ಪೇನ್ ತಂಡದ ಪರ ಗೆರಾರ್ಡ್ 87ನೆ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿದರು. ಆ್ಯಂ್ರಡ್ರೆಸ್ ಇನಿಯೆಸ್ಟಾ ನೀಡಿದ ಕ್ರಾಸ್‌ನ ನೆರವಿನಿಂದ ಗೆರಾರ್ಡ್ ಗೋಲು ಬಾರಿಸಿದರು.
ಮೊದಲಾವಧಿಯಲ್ಲಿ ಅಲ್ವರೊ ಮೊರಾಟ ಹಾಗೂ ಡೇವಿಡ್ ಸಿಲ್ವಾಗೆ ಗೋಲನ್ನು ನಿರಾಕರಿಸಿದ ಝೆಕ್ ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತು.
ಅಂತಿಮ ಕ್ಷಣದಲ್ಲಿ ಗೋಲು ಬಾರಿಸಿದ ಗೆರಾರ್ಡ್ ಸ್ಪೇನ್ ಮೂರು ಅಂಕ ಗಳಿಸಲು ನೆರವಾದರು.