ಪರಮಾಣು ಅಸ್ತ್ರಗಳ ಹೆಚ್ಚಳಕ್ಕೆ ಮುಂದಾದ ಪಾಕಿಸ್ತಾನ!
ಇಸ್ಲಾಮಾಬಾದ್,ಜೂನ್ 14: ಯುದ್ಧರಂಗದಲ್ಲಿ ಉಪಯುಕ್ತ ಶಸ್ತ್ರಾಸ್ತ್ರಗಳ ಹೆಚ್ಚಳಕ್ಕೆ ಪಾಕಿಸ್ತಾನ ಮುಂದಾಗಿದ್ದು. ಮುಂದಿನ ಹತ್ತು ವರ್ಷಗಳಲ್ಲಿ ಅದು ಆಯುಧಗಳ ಸಂಖ್ಯೆಯನ್ನು ಬಹಳಷ್ಟು ವೃದ್ಧಿಸಿಕೊಳ್ಳಲಿದೆ. ಇತ್ತ ಭಾರತ ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯಬಲ್ಲ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನುಅಭಿವೃದ್ಧಿ ಪಡಿಸುವುದರಲ್ಲಿ ತೊಡಗಿದೆ.
ಸ್ಟಾಕ್‌ಹೋಂ ಪೀಸ್ ರಿಸರ್ಚ್ ಇನ್ಸ್ ಟಿಟ್ಯೂಟ್ ಇದರ ಅಧ್ಯಯನ ಪ್ರಕಾರ ಈ ಗ ಪಾಕಿಸ್ತಾನದಲ್ಲಿ110ರಿಂದ 130 ಪರಮಾಣು ಅಸ್ತ್ರ ಇದ್ದರೆ ಭಾರತದಲ್ಲಿ 100ರಿಂದ 120 ಪರಮಾಣು ಅಸ್ತ್ರಗಳಿವೆ. ಆದರೆ ಪಾಕಿಸ್ತಾನ ಈಗ ಯುದ್ಧ ರಂಗದಲ್ಲಿ ಕೆಲಸ ಮಾಡಬಲ್ಲ ಸಣ್ಣ ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಅಸ್ತ್ರಗಳನ್ನು ಅಭಿವೃದ್ಧಿ ಪಡಿಸಿದರೆ ಭಾರತಕ್ಕಿಂತ ಪಾಕಿಸ್ತಾನದ ಸ್ಥಿತಿ ಉತ್ತಮ ಗೊಳ್ಳಲಿದೆ. ಪರಂಪರಾಗತ ಅಸ್ತ್ರಗಳ ವಿಷಯದಲ್ಲಿ ಭಾರತಕ್ಕಿಂತ ಪಾಕಿಸ್ತಾನ ಬಹಳ ಮುಂದಿದೆ. ಅಮೆರಿಕ ಮತ್ತು ರಷ್ಯಗಳ ಬಳಿ ಸರ್ವಾಧಿಕ ಪರಮಾಣು ಅಸ್ತ್ರಗಳಿವೆ. ಇವೆರಡೂ ರಾಷ್ಟ್ರಗಳಲ್ಲಿ ವಿಶ್ವದ ಪರಮಾಣು ಅಸ್ತ್ರಗಳಲ್ಲಿ ಶೆ. 95ರಷ್ಟು ಪಾಲು ಇವೆ. ಜಗತ್ತಿನಲ್ಲಿ ಕಡಿಮೆಯಾಗುತ್ತಿರುವ ಪರಮಾಣು ಅಸ್ತ್ರಗಳು:
2016ರ ಅಂಕಿ ಅಂಶಗಳಂತೆ ಅಮೆರಿಕ , ರಷ್ಯ, ಬ್ರಿಟನ್, ಫ್ರಾನ್ಸ್, ಚೀನ, ಭಾರತ, ಪಾಕಿಸ್ತಾನ, ಇಸ್ರೇಲ್, ಹಾಗೂ ಉತ್ತರ ಕೊರಿಯದ ಬಳಿ 15395 ಪರಮಾಣು ಅಸ್ತ್ರಗಳಿದ್ದವು ಎಂದು ಸ್ಟಾಕ್‌ಹೋಂ ಇನ್ಸ್‌ಟಿಟ್ಯೂಟ್ ವಾರ್ಷಿಕ ವರದಿಯಲ್ಲಿದೆ. 2015ರ ಆರಂಭದಲ್ಲಿ ಇದರ ಸಂಖ್ಯೆ 15850 ಆಗಿತ್ತು. ಇದು 1980ರಲ್ಲಿ ಎಪ್ಪತ್ತು ಸಾವಿರ ಆಗಿತ್ತು.