ದಿನಕ್ಕೆ 15,000 ಮಂದಿಗೆ ಊಟ ಬಡಿಸುವ ತಿಹಾರ್ ಜೈಲಿನ ಅಡುಗೆ ಮನೆಗೊಂದು ಭೇಟಿ
ಬಿಳಿಯುಡುಗೆ ಧರಿಸಿದ ಜನರು 200 ಕಿಲೋ ಗೋಧಿ ಹುಡಿಯಲ್ಲಿ ತ್ವರಿತವಾಗಿ 4,200 ರೋಟಿಗಳನ್ನು ತಯಾರಿಸುತ್ತಿದ್ದಾರೆ. ಬಳಿಯಲ್ಲಿಯೇ 36 ಕಿಲೋಗಳಷ್ಟು ಮಸಾಲೆಭರಿತ ಬೇಳೆ ಕಾಳುಗಳು ಕುದಿಯುತ್ತಿವೆ. ಅದನ್ನು ಆಗಾಗ್ಗೆ ಸೌಟಿನಲ್ಲಿ ಕಲಡಿಸಲಾಗುತ್ತಿದೆ. ಈ ಆಹಾರವನ್ನು ಏಷ್ಯಾದ ಅತೀ ದೊಡ್ಡ ಹಾಗೂ ಜನರಿಂದ ತುಂಬಿ ತುಳುಕುತ್ತಿರುವ ಜೈಲು ತಿಹಾರ್ ಜೈಲಿನಲ್ಲಿ ರಾತ್ರಿಯ ಭೋಜನಕ್ಕಾಗಿ ಸಿದ್ಧಪಡಿಸಲಾಗುತ್ತಿದೆ. ಆದರೆ ಆಗ ಸಮಯ ಮಧ್ಯಾಹ್ನದ 12.30 ಮತ್ತು ಆಗಷ್ಟೇ ಅಪರಾಧಿಗಳು ತಮ್ಮ ಮಧ್ಯಾಹ್ನದ ಭೋಜನ ಮುಗಿಸಿದ್ದರು. ಆದರೆ 14,348 ಮಂದಿ ಇರುವ ಜೈಲಿನ ಜನಸಂಖ್ಯೆಗೆ ಊಟ ತಯಾರಿ ಮಾತ್ರ ಬಹಳ ಬೇಗನೇ ಆರಂಭವಾಗಿಬಿಡುತ್ತದೆ. ಅಲ್ಲದೆ ತಿಹಾರ್ ಜೈಲಿನಲ್ಲಿ ಕೈದಿಗಳು ತಮ್ಮ ರಾತ್ರಿ ಭೋಜನವನ್ನು ಸಂಜೆ 6.30ಕ್ಕೇ ಮಾಡುತ್ತಾರೆ. ಲೆಸ್ಲೀ ಉಡ್ವಿನ್ ವಿವಾದದ ಬಳಿಕ ಪತ್ರಕರ್ತರಿಗೆ ತಿಹಾರ್ ಜೈಲಿಗೆ ಪ್ರವೇಶ ಸಿಗುವುದು ಕಷ್ಟವಾಗಿದೆ. ಕೆಲವು ಮಿತಿಗಳನ್ನೂ ಮಾಧ್ಯಮ ತಂಡದ ಮೇಲೆ ವಿಧಿಸಲಾಗಿದೆ. ಆದರೆ ವಿವಾದದ ಬಳಿಕ ಈಗ ಅಧಿಕಾರಿಗಳ ಸಾಮರ್ಥ್ಯಕ್ಕೆ ಹೋಲಿಸಿದರೆ ಕೈದಿಗಳ ಸಂಖ್ಯೆ ದ್ವಿಗುಣಗೊಂಡು 400 ಆಗಿದೆ. ಹೀಗಾಗಿ ಎಲ್ಲಾ 10 ಜೈಲಿನ ಸಂಕೀರ್ಣಗಳಲ್ಲಿ ಶಿಸ್ತನ್ನು ಕಾಯ್ದುಕೊಳ್ಳಲು ಬೆಳಗ್ಗಿನ 5 ಗಂಟೆಗೆ ತಯಾರಾಗುವ ಉಪಹಾರದಿಂದ ಆರಂಭವಾಗಿ ಸಮಯಕ್ಕೆ ಅನುಗುಣವಾಗಿ ನಡೆಯುತ್ತದೆ. ಬೆಳಗ್ಗಿನ ಉಪಹಾರದಲ್ಲಿ ಈಗ ವಾರಕ್ಕೆ ಎರಡು ಬಾರಿ ಅಕ್ಕಿಯ ಖೀರು ಕೂಡ ಸಿಗುತ್ತದೆ. ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯ ಆಹಾರ ತಜ್ಞರ ಸಲಹೆಯಂತೆ ವಿಶೇಷ ಆಹಾರದ ಪಟ್ಟಿಯನ್ನು ಇಲ್ಲಿ ಸಿದ್ಧಪಡಿಸಲಾಗಿದೆ. ಜೈಲು ನಂಬರ್ 2ರಲ್ಲಿ ಮಾತ್ರ ಮಧ್ಯಾಹ್ನದೂಟ ಮತ್ತು ರಾತ್ರಿಯೂಟ ತಯಾರಿಸಲು ನಾಲ್ಕು ಗಂಟೆಗಳು ಬೇಕಾಗುತ್ತವೆ ಎಂದು ತಿಹಾರ್ ಜೈಲಿನ ಕೈದಿಗಳ ಸೂಪರಿಂಟೆಂಡೆಂಟ್ ಸುನೀಲ್ ಕುಮಾರ್ ವರ್ಮಾ ಹೇಳುತ್ತಾರೆ. ಬೇಸಗೆಯಲ್ಲಿ ಅಡುಗೆಮನೆ ಬಿಸಿಯಾಗಿ ಧಗೆ ಇರುವ ಕಾರಣ ಅಡುಗೆ ತಯಾರಿ ತಡವಾಗುತ್ತದೆ. ಅಲ್ಲದೆ ಕೈದಿಗಳು ಆಗಾಗ್ಗೆ ವಿರಾಮ ತೆಗೆದುಕೊಳ್ಳುತ್ತಾರೆ. ಹೀಗಾಗಿ ಈ ಕೆಲಸವನ್ನು 22 ಮಂದಿಯ ಎರಡು ಗುಂಪುಗಳಲ್ಲಿ ಹಂಚಲಾಗಿದೆ. ಅವರು ಭೋಜನ ಸಿದ್ಧಪಡಿಸಲು ಪ್ರತ್ಯೇಕ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಜೈಲು ನಂಬರ್ 2ರಲ್ಲಿ ಸಿಹಿತಿನಿಸುಗಳನ್ನು ಸಿದ್ಧಪಡಿಸುವ ಕಾರ್ಖಾನೆಯೂ ಇದೆ. ಒಂದು ಪಫ್‌ಗಳು ಮತ್ತು ಪೇಡಗಳನ್ನು ಈ ಘಟಕದಲ್ಲಿ ಪ್ರತೀ ತಿಂಗಳು ತಯಾರಿಸಲಾಗುತ್ತದೆ. ಇದರ ಗುಣಮಟ್ಟವೂ ಅತ್ಯುತ್ತಮವಾಗಿರುವಂತೆ ಗಮನಿಸಲಾಗುತ್ತದೆ ಎನ್ನುತ್ತಾರೆ ವರ್ಮಾ. ಇಲ್ಲಿ ತಯಾರಾದ ಉತ್ಪನ್ನಗಳನ್ನು ಜೈಲಿನ ಇತರ ಭಾಗಗಳಿಗೂ ಹಂಚಲಾಗುತ್ತದೆ ಮತ್ತು ತಿಹಾರ್ ಜೈಲ್ ಉತ್ಪನ್ನಗಳೆನ್ನುವ ಬ್ರಾಂಡ್ ಹೆಸರಿನಲ್ಲಿ ಹೊರಜಗತ್ತಿಗೂ ಮಾರಲಾಗುತ್ತದೆ. ನಗರದಲ್ಲಿ 15 ರಿಟೇಲ್ ಮಳಿಗೆಗಳನ್ನು ಇದಕ್ಕಾಗಿ ತೆರೆಯಲಾಗಿದೆ.
ಎಲ್ಲಾ ಹಾಲಿನ ಉತ್ಪನ್ನಗಳು ಮತ್ತು ತರಕಾರಿಗಳನ್ನು ಮಾರಾಟಗಾರರಿಂದ ನೇರವಾಗಿ ಪಡೆದುಕೊಂಡು ತಾಜಾ ಮತ್ತು ಗುಣಮಟ್ಟವನ್ನು ನಿಭಾಯಿಸಲಾಗುತ್ತದೆ ಎನ್ನುತ್ತಾರೆ ವರ್ಮಾ. ತವಾ ಫ್ರೆಶ್ ರೋಟಿಗಳು, ದಾಲ್, ಪಲ್ಯ ಮತ್ತು ಪೇಡಾ ಇರುವ ಮಧ್ಯಾಹ್ನದ ಊಟವನ್ನೂ ಸವಿಯುವ ಅವಕಾಶ ಸಿಕ್ಕಿತು. ಅದು ಮನೆಯಲ್ಲೇ ತಯಾರಾದ ಆಹಾರದ ರುಚಿಯನ್ನು ಹೊಂದಿತ್ತು. ಹಿಂದೆ ತಿಹಾರ್ ಜೈಲಿನ ಆಹಾರದ ಬಗ್ಗೆ ಜೋಕ್ ಹರಡಿತ್ತು. ಇದನ್ನು ಒಮ್ಮೆ ತಿಂದವರು ಮತ್ತೊಮ್ಮೆ ಇಲ್ಲಿಗೆ ಬರುವುದಿಲ್ಲ ಎನ್ನಲಾಗುತ್ತಿತ್ತು ಎಂದು ವರ್ಮಾ ನೆನಪಿಸಿಕೊಂಡರು. ಆದರೆ ಈಗ ಆ ಸ್ಥಿತಿಯಿಲ್ಲ.
ಕೃಪೆ: indiatoday.intoday.in