×
Ad

ಅನಿಲ್ ಅಂಬಾನಿಗೆ ತೀಕ್ಷ್ಣ ಪತ್ರ ಬರೆದ ಕೇಜ್ರಿವಾಲ್ ಸರಕಾರ

Update: 2016-06-14 20:50 IST

ಹೊಸದಿಲ್ಲಿ, ಜೂ. 14: ರಾಜಧಾನಿಯಲ್ಲಿ ಆಗಾಗ ವಿದ್ಯುತ್ ಕೈಕೊಡುವ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಅರವಿಂದ್ ಕೇಜ್ರಿವಾಲ್ ಸರಕಾರ ರಿಲಯನ್ಸ್ ಅನಿಲ್ ಧಿರೂಬಾಯಿ ಅಂಬಾನಿ ಸಂಸ್ಥೆಯ ಅಧ್ಯಕ್ಷ ಅನಿಲ್ ಅಂಬಾನಿಗೆ ತೀಕ್ಷ್ಣ ಪತ್ರವೊಂದನ್ನು ಬರೆದಿದೆ.

ಈ ಸಂಸ್ಥೆಯ ಮಾಲಕತ್ವದ ಬಿಎಸ್ಇಎಸ್ ದೇಶದ ರಾಜಧಾನಿಗೆ ವಿದ್ಯುತ್ ಪೂರೈಸುತ್ತಿರುವ ಡಿಸ್ಕಾಂಗಳಲ್ಲಿ ಒಂದಾಗಿದೆ. ಸಮಸ್ಯೆ ಪರಿಹಾರಕ್ಕೆ ಮಾರ್ಗಸೂಚಿಯೊಂದರ ಜೊತೆ ಪ್ರತಿಕ್ರಿಯೆ ನೀಡಬೇಕು ಎಂದು ಕೇಜ್ರಿವಾಲ್ ಸರಕಾರ ಅನಿಲ್ ಅಂಬಾನಿಗೆ ಖಡಕ್ ಆಗಿ ಹೇಳಿದೆ.

ದಿಲ್ಲಿಯಲ್ಲಿ ವಿದ್ಯುತ್ ಕೊರತೆ ಇಲ್ಲ. ಡಿಸ್ಕಾಂಗಳು ಸಮರ್ಪಕ ನಿರ್ವಹಣೆ ಮಾಡದೇ ಇರುವುದರಿಂದ ಈ ಸಮಸ್ಯೆ ಆಗಿದೆ. 15 ವರ್ಷ ಮೊದಲು ಈ ಕ್ಷೇತ್ರವನ್ನು ಖಾಸಗೀಕರಣ ಮಾಡಿದ್ದು ಉತ್ತಮ ಸೇವೆ ನೀಡುವುದಕ್ಕೆ ಹೊರತು ಬಿಲ್ ಜಾಸ್ತಿ ಮಾಡಲು ಆಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News