×
Ad

ಮೇಕೆದಾಟು ಯೋಜನೆಗೆ ಜಯಾ ಕಿರಿಕ್

Update: 2016-06-14 21:45 IST

  ಹೊಸದಿಲ್ಲಿ, ಜೂ.12: ಸತತ ಎರಡನೆ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಜಯಲಲಿತಾ ಮಂಗಳವಾರ ಇದೇ ಮೊದಲ ಬಾರಿಗೆ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಾವೇರಿ ಜಲನಿರ್ವಹಣಾ ಮಂಡಳಿ ರಚನೆ, ಕೊಚ್ಚಿ-ಬೆಂಗಳೂರು ಅನಿಲ ಪೈಪ್‌ಲೈನ್ ಮಾರ್ಗ ಬದಲಾವಣೆ, ಜಲ್ಲಿಕಟ್ಟು ನಿಷೇಧ ರದ್ದು, ತಮಿಳಿಗೆ ರಾಷ್ಟ್ರೀಯ ಮಾನ್ಯತೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಅವರು ಪ್ರಧಾನಿಗೆ ಸಲ್ಲಿಸಿದರು. ಕರ್ನಾಟಕದ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡದಂತೆಯೂ ಅವರು ಆಗ್ರಹಿಸಿದರು. ಕೇಂದ್ರದ ಉದ್ದೇಶಿತ ಜಿಎಸ್‌ಟಿ ಮಸೂದೆಗೆ ತನ್ನ ಸರಕಾರವು ಸೂಚಿಸಿರುವ ಕೆಲವು ತಿದ್ದುಪಡಿಗಳನ್ನು ಮಾಡುವಂತೆಯೂ ಅವರು ಬೇಡಿಕೆ ಸಲ್ಲಿಸಿದರು.

ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳು ಜಿಎಸಟಿಯನ್ನು ಬೆಂಬಲಿಸಿದ್ದರೂ, ತಮಿಳುನಾಡು ಮಾತ್ರ ಮಸೂದೆಯಲ್ಲಿರುವ ಕೆಲವು ಅಂಶಗಳ ಬಗ್ಗೆ ಆಕ್ಷೇಪವೆತ್ತಿದೆ.

 ಮೇಕೆದಾಟಿನಲ್ಲಿರುವ ಕಾವೇರಿ ಕೊಳ್ಳದಲ್ಲಿ ಅಣೆಕಟ್ಟು ನಿರ್ಮಿಸಲು ಹೊರಟಿರುವ ಕರ್ನಾಟಕವು, ಕಾವೇರಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪನ್ನು ಉಲ್ಲಂಘಿಸಿದೆಯೆಂದು ಅವರು ಆರೋಪಿಸಿದರು.

  ಆದರೆ ಮೇಕೆದಾಟು ಯೋಜನೆಯಿಂದಾಗಿ ತಮಿಳುನಾಡಿಗೆ ಕಾವೇರಿ ನೀರಿನ ಹರಿವಿನಲ್ಲಿ ಯಾವುದೇ ಸಮಸ್ಯೆಯಾಗಲಾರದು ಎಂದು ಕರ್ನಾಟಕ ಈಗಾಗಲೇ ಸ್ಪಷ್ಟಪಡಿಸಿದೆ. ಮೇಕೆದಾಟು ಯೋಜನೆಯ ಪ್ರಸ್ತಾಪವನ್ನಷ್ಟೇ ಮುಂದಿಟ್ಟಿದೆ.ಯೋಜನೆಯ ವರದಿ ತಯಾರಿಸಿ ಕೇಂದ್ರ ಜಲಮಂಡಳಿಗೆ ಕಳುಹಿಸಿಕೊಟ್ಟ ಬಳಿಕವಷ್ಟೇ ಯೋಜನಾ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News