ವಾಲ್‌ಮಾರ್ಟ್‌ಸ್ಟೋರ್‌ನಲ್ಲಿ ಬಂದೂಕುಧಾರಿಯ ನ್ನು ಗುಂಡಿಟ್ಟು ಕೊಂದ ಅಮೆರಿಕನ್ ಪೊಲೀಸರು
Update: 2016-06-15 10:51 IST
ಟೆಕ್ಸಾಸ್,ಜೂನ್ 15: ಓರ್ಲೆಂಡೊ ಗುಂಡು ಹಾರಾಟದ ನಡುಕ ಮಾಯುವ ಮೊದಲೇ ಇನ್ನೊಬ್ಬ ಬಂಧೂಕುದಾರಿಯನ್ನು ಅಮೆರಿಕನ್ ಪೊಲೀಸರು ಗುಂಡುಹಾರಿಸಿ ಕೊಂದುಹಾಕಿದ ಘಟನೆ ವರದಿಯಾಗಿದೆ.ಟಕ್ಸಾಸ್ ಅಮಾರಿಲ್ಲೋಳದ ವಾಲ್‌ಮಾರ್ಟ್ ಸ್ಟೋರ್‌ಗೆ ಹತ್ತಿ ಇಬ್ಬರು ಉದ್ಯೋಗಿಗಳನ್ನು ಈತ ಬಂಧಿಯಾಗಿಸಿದ್ದಾನೆ ಎಂದು ಸುದ್ದಿಯಾಗಿತ್ತು.
ಪೊಲೀಸರು ಬಂದು ಬಂದೂಕುಧಾರಿಯನ್ನು ಗುಂಡಿಟ್ಟು ನೆಲಕ್ಕೊರಗಿಸಿದರು. ಯಾರಿಗೂ ಗಾಯಗಳಾಗಿಲ್ಲ. ಸ್ಥಳೀಯ ಸಮಯ ಮಧ್ಯಾಹ್ನ 12:45ಕ್ಕೆ ಘಟನೆ ನಡೆದಿದೆ. ಬಂಧೂಕುದಾರಿಯ ಹೆಸರು ಹೆಚ್ಚಿನ ಮಾಹಿತಿಗಳನ್ನು ಬಹಿರಂಗಗೊಳಿಸಿಲ್ಲ. ಕೆಲಸದ ಸ್ಥಳದಲ್ಲಿ ಉಂಟಾದ ವಾಗ್ವಾದದಿಂದಾಗಿ ಗುಂಡು ಹಾರಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.