×
Ad

ಶೀಲಾ ದೀಕ್ಷಿತ್ ಕಾಂಗ್ರೆಸ್ ಸಿಎಮ್ ಅಭ್ಯರ್ಥಿ, ಪ್ರಚಾರದ ಮುಂಚೂಣಿಯಲ್ಲಿ ಪ್ರಿಯಾಂಕಾ ?

Update: 2016-06-16 17:17 IST

ಹೊಸದಿಲ್ಲಿ, ಜೂ. 16 : ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಕಾಂಗ್ರೆಸ್ ವರಿಷ್ಠರು ಬಯಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಈ ವದಂತಿಯ ನಡುವೆಯೇ ಶೀಲಾ ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಹಾಗು ಉಪಾಧ್ಯಕ್ಷ ರಾಹುಲ್ ಗಾಂಧೀ ಅವರನ್ನು ಭೇಟಿಯಾಗಲಿದ್ದಾರೆ. 
ಉತ್ತರ ಪ್ರದೇಶ ಹಾಗು ಪಂಜಾಬ್ ಚುನಾವಣೆಗಳ ತಂತ್ರಗಾರಿಕೆ ರೂಪಿಸಲು ನೇಮಿಸಿದ ಪ್ರಶಾಂತ್ ಕಿಶೋರ್ ಅವರು ರಾಹುಲ್ ಗಾಂಧೀ ಅಥವಾ ಪ್ರಿಯಾಂಕಾ ಗಾಂಧೀ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವ ಐಡಿಯಾ ಮುಂದಿಟ್ಟಿದ್ದರು. ಆದರೆ ಅದಕ್ಕೆ ಯಾರೂ ಸಹಮತ ವ್ಯಕ್ತಪಡಿಸದೆ ಆ ಪ್ರಸ್ತಾವವನ್ನು ಕೈಬಿಡಲಾಗಿತ್ತು. ಇದೀಗ 78 ವರ್ಷದ  ಶೀಲಾ ದೀಕ್ಷಿತ್ ಅವರ ಹೆಸರು ಮುಂಚೂಣಿಗೆ ಬಂದಿದೆ. ಜೊತೆಗೆ ಪ್ರಿಯಾಂಕಾ ಗಾಂಧಿಗೆ ಪ್ರಚಾರದ ಹೊಣೆ ನೀಡಲು ಕಾಂಗ್ರೆಸ್ ಮುಂದಾಗಿದೆ ಎಂದು ತಿಳಿದು ಬಂದಿದೆ. 
ಮೂಲತ: ಉತ್ತರ ಪ್ರದೇಶದವರಾದ ಶೀಲಾ ದೀಕ್ಷಿತ್ ಸತತ ಮೂರು ಬಾರಿ ದಿಲ್ಲಿ ಮುಖ್ಯಮಂತ್ರಿಯಾಗಿದ್ದು, ಒಮ್ಮೆ ಸಂಸದರಾಗಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News