×
Ad

ಉತ್ತರ ಕೊರಿಯ ನಾಯಕನನ್ನು ಆಹ್ವಾನಿಸುವೆ: ಟ್ರಂಪ್

Update: 2016-06-16 23:40 IST

ವಾಶಿಂಗ್ಟನ್, ಜೂ. 16: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್-ಉನ್‌ರನ್ನು ತಾನು ಅಮೆರಿಕಕ್ಕೆ ಆಹ್ವಾನಿಸುವುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕಿಮ್‌ರೊಂದಿಗೆ ಮಾತುಕತೆ ನಡೆಸಲು ತಾನು ಉತ್ಸುಕನಾಗಿರುವುದನ್ನು ಟೀಕಿಸಿರುವ ಡೆಮಾಕ್ರಟಿಕ್ ಪಕ್ಷದ ಎದುರಾಳಿ ಹಿಲರಿ ಕ್ಲಿಂಟನ್‌ರನ್ನು ಅಪಹಾಸ್ಯ ಮಾಡುತ್ತಾ ಅವರು ಬುಧವಾರ ಈ ಹೇಳಿಕೆಯನ್ನು ನೀಡಿದರು.

‘‘ಮಾತನಾಡುವುದರಲ್ಲಿ ಏನು ತಪ್ಪಿದೆ? ನಾನು ಅಧಿಕೃತ ಸರಕಾರಿ ಭೋಜನಕ್ಕೆ ಅವರನ್ನು ಕರೆಯುತ್ತಿಲ್ಲ. ಇದು ಹಿಲರಿಗೆ ಅರ್ಥವಾಗುತ್ತಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News