ಗಂಡು ಹೆರಲಿಲ್ಲವೆಂದು ಕಿರುಕುಳ: ಬಾವಿಗೆ ಹಾರಿ ಮಹಿಳೆಯ ಆತ್ಮಹತ್ಯೆ
Update: 2016-06-16 23:50 IST
ಥಾಣೆ, ಜೂ.16: ಹೆಣ್ಣು ಮಕ್ಕಳನ್ನೇ ಹೆತ್ತ ಕಾರಣಕ್ಕಾಗಿ ಗಂಡ ಹಾಗೂ ಆತನ ಮನೆಯವರು ನೀಡುತ್ತಿದ್ದ ಕಿರುಕುಳದಿಂದ ನೊಂದು 26ರ ಹರೆಯದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇಲ್ಲಿನ ಮುರ್ಬಾದ್ ತಾಲೂಕಿನ ಕಟ್ಯಾಚಿವಾಡೆ ಗ್ರಾಮದಿಂದ ವರದಿಯಾಗಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.
ರಂಜನಾ ಕಾಶಿನಾಥ ಥೋಂಬ್ರೆ ಎಂಬಾಕೆ ನಿನ್ನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ. ಆಕೆಗೆ ಗಂಡ ಹಾಗೂ ಅವನ ಮನೆಯವರು ವರದಕ್ಷಿಣೆಯ ಸಂಬಂಧ ಹಾಗೂ ಗಂಡು ಮಗು ಹೆರಲಿಲ್ಲವೆಂಬ ಕಾರಣಕ್ಕೆ ಚಿತ್ರಹಿಂಸೆ ಹಾಗೂ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ.
ಪ್ರಕರಣದ ಸಂಬಂಧ ಮೃತಳ ಪತಿ ಕಾಶಿನಾಥ ಭಾವೂ ಥೋಂಬ್ರೆ(26), ಭಾಗಿಬಾಯಿ ಭಾವೂ ಥೋಂಬ್ರೆ(58), ವಸಂತ ಭಾವೂ ಥೋಂಬ್ರೆ(28) ಹಾಗೂ ಲತಾ ವಸಂತ ಥೋಂಬ್ರೆ(25) ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, ಇದುವರೆಗೆ ಯಾರನ್ನೂ ಬಂಧಿಸಿಲ್ಲ.