ತೀಸ್ತಾ ಎನ್‌ಜಿಒ ನೋಂದಣಿ ರದ್ದು
Update: 2016-06-16 23:53 IST
ಹೊಸದಿಲ್ಲಿ, ಜೂ.16: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರ ಎನ್‌ಜಿಒದ ಮೇಲೆ ಮತ್ತೊಮ್ಮೆ ಮುಗಿಬಿದ್ದಿರುವ ಸರಕಾರವು ಗುರುವಾರ ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ)ಯಡಿ ಅದು ಹೊಂದಿದ್ದ ಪರವಾನಿಗೆಯನ್ನು ರದ್ದುಗೊಳಿಸಿದೆ.
ವಿದೇಶಿ ಕರೆನ್ಸಿ(ನಿಯಂತ್ರಣ) ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ತೀಸ್ತಾ ಮತ್ತು ಅವರ ಪತಿ ಜಾವೇದ್ ಆನಂದ್ ನಡೆಸುತ್ತಿರುವ ಸಬ್‌ರಂಗ್ ಟ್ರಸ್ಟ್‌ನ ನೋಂದಣಿಯನ್ನು ಕಳೆದ ವರ್ಷ ಆರು ತಿಂಗಳ ಅವಧಿಗೆ ಅಮಮಾನತುಗೊಳಿಸಲಾಗಿತ್ತು.