34 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ಕೊಹ್ಲಿ

Update: 2016-06-17 10:59 GMT

ಮುಂಬೈ, ಜೂ.17: ಇಲ್ಲಿನ ವರ್ಲಿಯಲ್ಲಿ ಭಾರತದ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ 34ಕೋಟಿ ರೂ.ಮೌಲ್ಯದ ಅಪಾರ್ಟ್‌ಮೆಂಟ್   ಖರೀದಿಸಿದ ವಿಚಾರ ಬೆಳಕಿಗೆ ಬಂದಿದೆ.
ಓಂಕಾರ್ ರಿಯಲೆಟರ್ಸ್ &  ಡೆವಲಪರ್ಸ್  ಸಂಸ್ಥೆಯಿಂದ ಕೊಹ್ಲಿ ಮನೆ ಖರೀದಿಸಿದ್ದಾರೆ. 
ಆಂಗ್ಲ ಪತ್ರಿಕೆಯೊಂದರಲ್ಲಿ  ಪ್ರಕಟಗೊಂಡಿರುವ ವರದಿಯಂತೆ 7,171 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌‌ಮೆಂಟ್‌ಗೆ ಕೊಹ್ಲಿ 34 ಕೋಟಿ ರೂ. ಪಾವತಿಸಿದ್ದಾರೆ.34ನೆ ಮಹಡಿಯ ಟವರ್ ’ಸಿ’ಯಲ್ಲಿ ಅಪಾರ್ಟ್‌‌ಮೆಂಟ್‌ನ್ನು ಕೊಹ್ಲಿ ಖರೀದಿಸಿದ್ದಾರೆ. 
ಆಲ್ ರೌಂಡರ್‌ ಯುವರಾಜ್‌ ಸಿಂಗ್ ’ಸಿ’  ಟವರ್‌ನ 29ನೆ ಮಹಡಿಯಲ್ಲಿನ ಅಪಾರ್ಟ್‌‌ಮೆಂಟ್‌ನ್ನು 2014ರಲ್ಲಿ ಖರೀದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News