×
Ad

ಸಂಪುಟ ಪುನಾರಚನೆ; ಸೋನಿಯಾ ಗಾಂಧಿ ನಿವಾಸದಲ್ಲಿ ನಾಳೆ ಮತ್ತೆ ಸಭೆ

Update: 2016-06-17 17:21 IST

 ಹೊಸದಿಲ್ಲಿ, ಜೂ.17: ರಾಜ್ಯ ಸಂಪುಟ ಪುನಾರಚನೆ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆ ಅಪೂರ್ಣವಾಗಿದೆ.
 ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ಕೈ ಬಿಡುವ ಸಚಿವರ ಮತ್ತು ಇವರ ಬದಲಿಗೆ ಸೇರ್ಪಡೆಯಾಗಲಿರುವ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವುದನ್ನು ನಿರೀಕ್ಷಿಸಲಾಗಿತ್ತು. 
ಆದರೆ ಸಭೆಯಲ್ಲಿ ಚರ್ಚೆ ಅಪೂರ್ಣಗೊಂಡಿದೆ. ಇಂದಿನ ಸಭೆಯಲ್ಲಿ ಕೇವಲ ಪ್ರಾಥಮಿಕ ಚರ್ಚೆ ನಡೆದಿದೆ. ಸಭೆ ಅಪೂರ್ಣಗೊಂಡಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಮತ್ತೆ ಸಭೆ ನಡೆಯಲಿದೆ ಎಂದು  ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News