ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಪರಿಚಿತ ಮಹಿಳೆಯ ಕೈ ಹಿಡಿದ ಮಹಾರಾಷ್ಟ್ರ ಸಚಿವ
Update: 2016-06-17 22:29 IST
ಮುಂಬೈ, ಜೂ. 17: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೂ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ರಾಜ್ಯದ ನಾಗರೀಕ ಪೂರೈಕೆ ಸಚಿವ ಗಿರೀಶ್ ಬಾಪಟ್ ಅವರು ಅಪರಿಚಿತ ಮಹಿಳೆಯೊಬ್ಬರ ಕೈ ಹಿಡಿದುಕೊಂಡ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೋಟೋದ ಬಗ್ಗೆ ಅತ್ಯಂತ ಕೀಳು ಅಭಿರುಚಿಯ ಕಮೆಂಟ್ ಗಳು ಬಂದಿದ್ದು ಸಚಿವರ ವರ್ತನೆಯ ಕುರಿತು ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಫೋಟೋದಲ್ಲಿದ್ದ ಮಹಿಳೆ ದೂರು ನೀಡಿದ್ದು ಮುಂಬೈ ಪೊಲೀಸರು ಫೋಟೋ ತೆಗೆದ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. " ಸಚಿವರು ನನ್ನ ತಂದೆಯಂತೆ. ನನ್ನನ್ನು ಮುಖ್ಯಮಂತ್ರಿಗೆ ಭೇಟಿ ಮಾಡಿಸಲು ಅವರು ನನ್ನ ಕೈಹಿಡಿದು ಮುಂದೆ ಕರೆದರು ಅಷ್ಟೇ. ಅದನ್ನೇ ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ" ಎಂದು ಮಹಿಳೆ ದೂರಿದ್ದಾರೆ.