ಪದ್ಮಶ್ರೀ ಕಲೀಮುಲ್ಲಾ ಖಾನ್ ಎಂಬ ಕೃಷಿ ಕಲಾವಿದ !
ಕೃಷಿ ಒಂದು ಕಲೆಯಲ್ಲ ಎಂದು ಯಾರು ಹೇಳಿದ್ದು? ಕಲಾವಿದ ಕಲೀಂ ಉಲ್ಲಾ ಖಾನ್ (57) ಅವರನ್ನೇ ನೋಡಿ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪಡೆದ ಈ ಕೃಷಿಕ ವಿಭಿನ್ನ ಆಕಾರ, ಬಣ್ಣ ಮತ್ತು ಗಾತ್ರದ 300 ವಿಧದ ಮಾವಿನಹಣ್ಣುಗಳನ್ನು ಒಂದೇ ಮರದಲ್ಲಿ ಬೆಳೆಯುತ್ತಾರೆ.
ಕಲೀಮುಲ್ಲಾ ಖಾನ್ ಈ ಮಾವಿನ ಹಣ್ಣಿನ ಮರವನ್ನು ಅತೀ ಜಾಗರೂಕವಾಗಿ ಬೆಳೆಸಿದ್ದಾರೆ. ಉತ್ತರ ಪ್ರದೇಶದ ಲಖ್ನೋದ ಮಲಿಹಾಬಾದ್‌ನಲ್ಲಿ ನೆಲೆಸಿರುವ ಕಲೀಮುಲ್ಲಾ ಖಾನ್ ಪ್ರಾಂತ ದಸೇರಿ ವಿಧದ ಮಾವಿನಹಣ್ಣುಗಳಿಗೆ ಪ್ರಸಿದ್ಧ. ಆದರೆ ಕಲೀಮುಲ್ಲಾ ಖಾನ್ ಒಂದು ವಿಧದ ಮಾವಿನಹಣ್ಣಿನಿಂದ ತೃಪ್ತರಾಗಿಲ್ಲ. 14 ಎಕರೆಗಳಲ್ಲಿ ವಿವಿಧ ರೀತಿಯ ಮಾವುಗಳನ್ನು ಬೆಳೆಸಿ ದೇಶದಾದ್ಯಂತ ಮತ್ತು ಗಲ್ಫ್ ರಾಷ್ಟ್ರಗಳಿಗೂ ಮಾರುತ್ತಾರೆ. ಇಂತಹ ಹಣ್ಣುಗಳನ್ನು ಬೇರೆಲ್ಲೂ ನೀವು ಸವಿಯಲಾರಿರಿ ಎನ್ನುವ ಖಾನ್ ತಮ್ಮ ಹಣ್ಣು ಬಿಡುವ ಮಾವಿನ ಮರಗಳ ರೂಪದಲ್ಲಿ ಸಾವಿನ ನಂತರವೂ ಅಮರವಾಗಿರಲು ಬಯಸಿದ್ದಾರೆ. 300 ವಿಧದ ಮಾವು ಬಿಡುವ ಈ ಮರ 100 ವರ್ಷ ಹಳೆಯದು. 1987ರಲ್ಲಿ ಖಾನ್ ಈ ಮರವನ್ನು ಬೆಳೆಸಲು ಆರಂಭಿಸಿದ್ದರು. ತಮ್ಮ ಕಲ್ಪನೆ ಮತ್ತು ವೈಜ್ಞಾನಿಕ ಜ್ಞಾನದಿಂದ ಇದಕ್ಕೆ ವಿಭಿನ್ನ ರೂಪ ಕೊಟ್ಟರು. ತಮ್ಮ ಮರಣದ ಬಳಿಕವೂ ಈ ಮರ ಜೀವಿಸಬೇಕು ಎನ್ನುವುದು ಖಾನ್ ಬಯಕೆ. ಈ ಮರದಲ್ಲಿ ಬೆಳೆಯುವ ಮಾವುಗಳಿಗೆ ಕಲೀಮುಲ್ಲಾ ಖಾನ್ ತಮ್ಮದೇ ಕುಟುಂಬದವರ ಹೆಸರಿಟ್ಟಿದ್ದಾರೆ. ಅಸ್ಲ್ ಉಲ್ ಮುಖಾರರ್, ಹುಸ್ನ್ ಇ ಆರಾ, ಖಾಸ್ ಉಲ್ ಖಾಸ್ ಹೀಗೆ ಮಾವುಗಳ ಹೆಸರಿವೆ.
ಮಾವು ಮಹಾರಾಜ ಎಂದೇ ಜನಜನಿತರಾಗಿರುವ ಕಲೀಮುಲ್ಲಾ ಖಾನ್ ತಮ್ಮ ಮಾವುಗಳ ಜ್ಞಾನದಿಂದ ಎಲ್ಲರಿಗೆ ಬೆರಗು ಮೂಡಿಸುತ್ತಾರೆ. ಪ್ರತೀ ವಿಧದ ಮಾವುಗಳನ್ನೂ ಅವರುಗಳನ್ನು ನೋಡಿದ ಕೂಡಲೇ ಮತ್ತು ಪರಿಮಳದಿಂದಲೇ ಗುರುತಿಸುತ್ತಾರೆ. ಅನಾರ್ಕಲಿಗೆ ಎರಡು ಪದರಗಳಿವೆ. ಕಿತ್ತಳೆ ಮೊದಲ ಪದರ. ಆದರೆ ಒಳ ಹೋದಂತೆಲ್ಲ ಹಳದಿ ಬಣ್ಣದ ಮತ್ತೊಂದು ಚರ್ಮ ಕಾಣುತ್ತದೆ. ಇದರ ರುಚಿಯೂ ಪ್ರತ್ಯೇಕ. ಮೊದಲಿಗೆ ಚಾಸಾ ವಿಧದ ಹಾಗೆ ರುಚಿ ಬಂದರೆ ನಂತರ ಚಾಸಾ ಮತ್ತು ಲಖನೌನ ದಸೆರಿ ಮಾವಿನ ರುಚಿ ಪಡೆದುಕೊಳ್ಳುತ್ತದೆ. ಏಕೆಂದರೆ ಅನಾರ್ಕಲಿಯಲ್ಲಿ ಎರಡು ವಿಧದ ಮಾವುಗಳು ಬೆರೆತಿವೆ ಎನ್ನುತ್ತಾರೆ.
300 ವಿಧದ ಮಾವು ಬಿಡುವ ಮಾವಿನ ಮರದ ಮೇಲೆ 30 ವರ್ಷಗಳ ಹಿಂದೆ ಅವರು ತಮ್ಮ ಜಾದೂ ತೋರಿಸಿದ್ದರೂ, ಅದಕ್ಕೆ 100 ವರ್ಷವಾಗಿದೆ. ಅಲ್ಲದೆ ಖಾನ್ ಕ್ರಿಕೆಟ್ ಹುಚ್ಚರೂ ಹೌದು ಮತ್ತು ಸಚಿನ್ ಅಭಿಮಾನಿ, ಪ್ರತೀ ದಿನ ನೂರಾರು ಖರೀದಿದಾರರು ಮತ್ತು ಪ್ರವಾಸಿಗರು ಅವರ ಆರ್ಚರ್ಡ್ ಹೊಲಕ್ಕೆ ಭೇಟಿ ನೀಡುತ್ತಾರೆ. ಪ್ರತಿಯೊಬ್ಬರನ್ನೂ ಅವರು ಪ್ರತ್ಯೇಕವಾಗಿ ಕರೆದು ಅತಿಥಿ ಸತ್ಕಾರ ಮಾಡುತ್ತಾರೆ. ಅವರು 15 ವರ್ಷದಲ್ಲಿ ಬೆಳೆದದ್ದೆಲ್ಲವನ್ನೂ ಮಾರಿದ್ದಾರೆ. ಅದೇ ಅವರ ಶ್ರೇಷ್ಠತೆ.
ಕೃಪೆ: grin.news