×
Ad

ಹಾಲೆ ಓಪನ್ ಟೆನಿಸ್ ಟೂರ್ನಿ: ಫೆಡರರ್ ಸೆಮಿಫೈನಲ್‌ಗೆ

Update: 2016-06-17 23:30 IST

ಬರ್ಲಿನ್, ಜೂ.17: ಸ್ವಿಸ್‌ನ ಸೂಪರ್ ಸ್ಟಾರ್ ರೋಜರ್ ಫೆಡರರ್ ಹಾಲೆ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದರು.

ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಫೆಡರರ್ ಅವರು ಬೆಲ್ಜಿಯಂನ ಡೇವಿಡ್ ಗಫಿನ್‌ರನ್ನು 6-1, 7-6(10) ಸೆಟ್‌ಗಳ ಅಂತರದಿಂದ ಮಣಿಸಿದರು.

ಗಾಯದ ಸಮಸ್ಯೆಯಿಂದಾಗಿ ಫ್ರೆಂಚ್ ಓಪನ್‌ನಿಂದ ಹೊರಗುಳಿದಿದ್ದ ಫೆಡರರ್ ಫಿಟ್‌ನೆಸ್ ಪಡೆದು ಈ ಟೂರ್ನಿಗೆ ವಾಪಸಾಗಿದ್ದರು.

 ಫೆಡರರ್ ಈ ವರ್ಷ ಯಾವುದೇ ಎಟಿಪಿ ಪ್ರಶಸ್ತಿಯನ್ನು ಜಯಿಸಿಲ್ಲ. ಜರ್ಮನಿಯಲ್ಲಿ ನಡೆಯುತ್ತಿರುವ ಹಾಲೆ ಟೂರ್ನಿಯಲ್ಲಿ 9ನೆ ಬಾರಿ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ. ಈ ಟೂರ್ನಿಯು ಫೆಡರರ್‌ಗೆ ವಿಂಬಲ್ಡನ್ ಟೂರ್ನಿಗೆ ಇರುವ ತಾಲೀಮು ಪಂದ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News