×
Ad

ಈ ಇರಾನಿಯನ್ ಲಿಫ್ಟರ್ ನ ಗಾತ್ರ ನೋಡಿದರೆ ನೀವು ಬೆಚ್ಚಿ ಬೀಳುವುದು ಖಚಿತ!

Update: 2016-06-17 23:35 IST

ಮೊದಲ ಬಾರಿಗೆ ನೀವು ಈ 24 ವರ್ಷದ ಹಫ್ಪೋರ್ ಜ್ಯೂಲಿಯಸ್ ಬ್ಜೋರ್ನಸನ್ GOT ಧಾರಾವಾಹಿಯಲ್ಲಿ ಮೌಂಟೇನ್ ಪಾತ್ರದಲ್ಲಿ ನೋಡಿ ಅಚ್ಚರಿಪಡದೇ ಇರಲಾರಿರಿ. ಏನು? ಈತ ನಿಜ ವ್ಯಕ್ತಿ ಆಗಿರಲಾರ ಎಂದೇ ನಿಮಗೆ ಅನಿಸಲಿದೆ. ದೈತ್ಯ ಗಾತ್ರದ ವ್ಯಕ್ತಿಗಳನ್ನು ಬಹಳಷ್ಟು ನಾವು ನೋಡಿದ್ದೇವೆ. ಆದರೆ ಮಧ್ಯ ಪ್ರಾಚ್ಯದ ಈ ವ್ಯಕ್ತಿಯನ್ನು ಜನರು ಪರ್ಶಿಯನ್ ಹರ್ಕ್ಯುಲಸ್ ಎನ್ನುತ್ತಾರೆ. ಕೆಲವೊಮ್ಮೆ ಈತನನ್ನು ಇರಾನಿ ಹಲ್ಕ್ ಎನ್ನುವುದೂ ಇದೆ.


ಇರಾನಿನ ಪವರ್ ಲಿಫ್ಟರ್ ಸಜದ್ ಘರೀಬಿ ನೀವು ಜೀವಮಾನದಲ್ಲಿ ಕಂಡಿರುವ ಅತೀ ದೈತ್ಯ ಮನುಷ್ಯ. ಈ ವ್ಯಕ್ತಿ ಇರಾನಿ ಹಲ್ಕ್ ಎಂದೇ ಈಗ ಮಾಧ್ಯಮಗಳು ಮತ್ತು ಅಂತರ್ಜಾಲದಲ್ಲಿ ಪ್ರಸಿದ್ಧಿಪಡೆದಿದ್ದಾರೆ. ಈ ವ್ಯಕ್ತಿಯ ಬಗ್ಗೆ ಹೆಚ್ಚು ವಿವರಗಳು ಇಲ್ಲ. ಆದರೆ 175 ಕೇಜಿ ತೂಕದ ಈ ವ್ಯಕ್ತಿಗೆ ಭಾರ ಎತ್ತುವುದು ಇಷ್ಟದ ಅಭ್ಯಾಸ. ಅವರ ಸುತ್ತಮುತ್ತ ಇದ್ದವರೆಲ್ಲರೂ ಕುಬ್ಜರಾಗಿ ಕಾಣುತ್ತಾರೆ. ಕೆಲವೊಮ್ಮೆ ಕಾರಿನಲ್ಲಿ ಕೂರುವುದೂ ಅವರಿಗೆ ಕಷ್ಟವಾಗುತ್ತದೆ. ಹಾಗಿದ್ದರೂ ಅವರು ಒಳ್ಳೇ ಹೃದಯದ ಉತ್ತಮ ವ್ಯಕ್ತಿ ಎಂದು ಆಪ್ತರು ಹೇಳುತ್ತಾರೆ.

ಕೃಪೆ: www.scoopwhoop.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News