ಭಾರತಕ್ಕೆ ಮೋಡಬಿತ್ತನೆ ತಂತ್ರಜ್ಞಾನ ನೀಡಲು ಮುಂದಾದ ಚೀನಾ
ಬೀಜಿಂಗ್, ಜೂ. 18: ಬರಪೀಡಿತ ಮಹಾರಾಷ್ಟ್ರದಲ್ಲಿ ಮಳೆ ಬರಿಸುವುದಕ್ಕಾಗಿ ಮೋಡಬಿತ್ತನೆ ತಂತ್ರಜ್ಞಾನವನ್ನು ಒದಗಿಸಲು ಹಾಗೂ ಸ್ಥಳೀಯ ಹವಾಮಾನ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಲು ಭಾರತದೊಂದಿಗೆ ಮಾತುಕತೆಯಲ್ಲಿ ತೊಡಗಿದೆ.
ಕಳೆದ ಎರಡು ವರ್ಷಗಳಿಂದ ಭೀಕರ ಬರದ ದವಡೆಗೆ ಸಿಲುಕಿರುವ ಮಹಾರಾಷ್ಟ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಬೀಜಿಂಗ್, ಶಾಂೈ ಮತ್ತು ಅನ್ಹುಲ್ ಪ್ರಾಂತದ ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡವೊಂದು ಈ ನಿಟ್ಟಿನಲ್ಲಿ ಸಹಕಾರದ ಪ್ರಸ್ತಾಪವನ್ನು ಮುಂದಿಟ್ಟಿದೆ.
ಚೀನಾ ಹಲವು ವರ್ಷಗಳಿಂದ ಸಿಲ್ವರ್ ಅಯೊಡೈಡ್ ಲೇಪಿತ ರಾಕೆಟ್‌ಗಳನ್ನು ಹಾರಿಸಿ ಮೋಡಬಿತ್ತನೆ ಮಾಡುತ್ತಿದೆ. ಆದರೆ, ಈ ವಿಧಾನಕ್ಕೆ ಮೋಡಗಳು ಬೇಕಾಗುತ್ತವೆ.
ಮಾತುಕತೆಗಳು ಯಶಸ್ವಿಯಾದರೆ, ಚೀನಾದ ಪರಿಣತರು ತಮ್ಮ ಆಧುನಿಕ ಮೋಡಬಿತ್ತನೆ ತಂತ್ರಜ್ಞಾನದ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ ಎಂದು ಚೀನಾದ ಸರಕಾರಿ ಪತ್ರಿಕೆ ‘ಚೀನಾ ಡೇಲಿ’ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಅಗತ್ಯವಿದ್ದರೆ 2017ರ ಮಳೆಗಾಲದಲ್ಲಿ ಮಹಾರಾಷ್ಟ್ರದ ಮರಾಠವಾಡ ವಲಯದಲ್ಲಿ ಮಳೆ ಬರಿಸುವ ಗುರಿಯನ್ನು ತರಬೇತಿ ಹೊಂದಿದೆ.
ಚೀನಾ 1958ರಲ್ಲೇ ಮೋಡಬಿತ್ತನೆ ತಂತ್ರಜ್ಞಾನವನ್ನು ಬಳಸಲು ಆರಂಭಿಸಿತ್ತು. ಇಂದು ಈ ಕ್ಷೇತ್ರದಲ್ಲಿ ಅದು ಜಗತ್ತಿನಲ್ಲೇ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಅದು ಹೊಂದಿದೆ.