×
Ad

ವೆಚ್ಚ ಕಡಿತಕ್ಕಾಗಿ ಮೆಕ್‌ಡೊನಾಲ್ಡ್ಸ್ ಹುದ್ದೆಗಳು ಭಾರತಕ್ಕೆ?

Update: 2016-06-18 21:16 IST

ನ್ಯೂಯಾರ್ಕ್, ಜೂ. 18: ಫಾಸ್ಟ್‌ಫೂಡ್ ಬಹುರಾಷ್ಟ್ರೀಯ ಕಂಪೆನಿ ‘ಮೆಕ್‌ಡೊನಾಲ್ಡ್ಸ್’ ಕಳೆದ ವರ್ಷದ ನವೆಂಬರ್‌ನಲ್ಲಿ ತೆಗೆದುಕೊಂಡ ನಿರ್ಣಯದಂತೆ ತನ್ನ ಹುದ್ದೆಗಳನ್ನು ಭಾರತಕ್ಕೆ ಪರಭಾರೆ ಮಾಡುವ ಸಾಧ್ಯತೆಯಿದೆ ಎಂದು ‘ನ್ಯೂಯಾರ್ಕ್ ಪೋಸ್ಟ್’ನ ವರದಿಯೊಂದು ತಿಳಿಸಿದೆ.

500 ಮಿಲಿಯ ಡಾಲರ್ (ಸುಮಾರು 3,336 ಕೋಟಿ ರೂಪಾಯಿ) ವೆಚ್ಚ ಉಳಿತಾಯ ಮಾಡುವುದಕ್ಕಾಗಿ ಅದು ಈ ನಿರ್ಧಾರ ತೆಗೆದುಕೊಂಡಿದೆ ಹಾಗೂ ಸಂಸ್ಥೆಯ ಮುಖ್ಯಾಧಿಕಾರಿ ಸ್ಟೀವ್ ಈಸ್ಟರ್‌ಬ್ರೂಕ್ ಈ ನಿರ್ಧಾರದ ಮುಂಚೂಣಿಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News