×
Ad

ಆರೋಪಿಗಳ ಪಟ್ಟಿಗೆ ಮಮತಾ ಕುಲಕರ್ಣಿ

Update: 2016-06-18 23:51 IST

ಥಾಣೆ,ಜೂ.18: ಎರಡು ಸಾವಿರ ಕೋಟಿ ರೂ. ವೌಲ್ಯದ ಎಫೆಡ್ರಿನ್ ಮಾದಕದ್ರವ್ಯ ಕಳ್ಳಸಾಗಣೆ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಮಾಜಿ ಬಾಲಿವುಡ್ ನಟಿ ಮಮತಾ ಕುಲಕರ್ಣಿಯ ಹೆಸರನ್ನು ಥಾಣೆ ಪೊಲೀಸರು ಸೇರ್ಪಡೆಗೊಳಿಸಿದ್ದಾರೆ. ಈ ಮಾದಕದ್ರವ್ಯ ದಾಸ್ತಾನನ್ನು ಎಪ್ರಿಲ್ 12ರಂದು ಱ ಆವೊನ್ ಲೈಫ್ ಸಯನ್ಸ್ ಲಿ.ಕಂಪೆನಿೞಯಿಂದ ವಶಪಡಿಸಿಕೊಳ್ಳಲಾಗಿತ್ತು. ಸೋಲಾಪುರದಿಂದ ಕಾರ್ಯಾಚರಿಸುವ ಈ ಕಂಪೆನಿಯ ನಿರ್ದೇಶಕರಲ್ಲಿ ಮಮತಾ ಕುಲಕರ್ಣಿ ಕೂಡಾ ಒಬ್ಬರಾಗಿದ್ದು, ಸುಮಾರು 11 ಲಕ್ಷ ಶೇರುಗಳನ್ನು ಹೊಂದಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಫೆಡ್ರಿನ್ ಡ್ರಗ್ಸ್ ಕಳ್ಳಸಾಗಣೆ ಪ್ರಕರಣಕ್ಕೆ ಎಫ್‌ಐಆರ್‌ನಲ್ಲಿ ಮಮತಾ ಅವರ ಹೆಸರನ್ನು ಸೇರ್ಪಡೆಗೊಳಿಸಲಾಗಿದ್ದು, ಅವರ ಬಂಧನಕ್ಕಾಗಿ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮಮತಾ ಅವರ ಪತಿ ವಿಕ್ಕಿ ಗೋಸ್ವಾಮಿಗೆ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆಯೆಂದು ಥಾಣೆಯ ಪೊಲೀಸ್ ಆಯುಕ್ತ ಪರಮ್‌ಬೀರ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News