‘ಮೈಟ್’ಗೆ ಶ್ರೇಷ್ಠ ಹಸಿರೀಕರಣ ಪ್ರಶಸ್ತಿ

Update: 2016-06-18 18:47 GMT

ಮಂಗಳೂರು, ಜೂ. 18: ಪರಿಸರ ಸಂರಕ್ಷಣೆ, ಹಸಿರು ವಲಯದ ಅಭಿವೃದ್ಧಿ ಸೇರಿದಂತೆ ಪರಿಸರ ಪೋಷಕ ಚಟುವಟಿಕೆಗಳಲ್ಲಿನ ಸಾಧನೆಗಾಗಿ ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಆ್ಯಂಡ್ ಎಂಜಿನಿಯರಿಂಗ್ ಕಾಲೇಜಿ (ಮೈಟ್)ಗೆ ಶ್ರೇಷ್ಠ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ ದೊರೆತಿದೆ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶುಕ್ರವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರಣ್ಯ, ಪರಿಸರ ಇಲಾಖೆಯ ಸಚಿವ ಬಿ. ರಮಾನಾಥ ರೈ ಪ್ರಶಸ್ತಿ ವಿತರಿಸಿದರು.

ಪರಿಸರ ಸಂರಕ್ಷಣೆ, ಗ್ರೀನ್ ಬೆಲ್ಟ್, ಹಸುರೀಕರಣ ಮುಂತಾದ ಸಾಧನೆಗಳನ್ನು ಗಮನಿಸಿ, ತಜ್ಞರ ಸಮಿತಿಯು ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 74 ಎಕರೆಗಳ ವಿಶಾಲ ಕ್ಯಾಂಪಸ್‌ನ್ನು ಹೊಂದಿರುವ ಮೈಟ್ ಹಸಿರೀಕರಣ, ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದೆ. ಜಲ ಮರುಪೂರಣ, ಮಳೆನೀರು ಕೊಯ್ಲು ಮುಂತಾದ ಜಲ ಸಂರಕ್ಷಣಾ ಕಾರ್ಯ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News