ಭೂಮಿಯ 113 ಮಂದಿಯಲ್ಲಿ ಒಬ್ಬ ನಿರಾಶ್ರಿತ!: ವಿಶ್ವಸಂಸ್ಥೆ
ಜಿನೀವ, ಜೂನ್20: ಹುಟ್ಟೂರಿನಿಂದ ಪ್ರಾಣವುಳಿಸಲಿಕ್ಕಾಗಿ ಪಲಾಯನ ಗೈಯುತ್ತಿರುವ ನಿರಾಶ್ರಿತರ ಸಂಖ್ಯೆ ಈಗ 65 ದಶಲಕ್ಷವನ್ನೂ ಮೀರಿದೆ ಎಂದು ವಿಶ್ವಸಂಸ್ಥೆ ವರದಿ ವಿವರಿಸಿದೆ. ಜಗತ್ತು ಅಂತಾರಾಷ್ಟ್ರೀಯ ನಿರಾಶ್ರಿತರ ದಿನವನ್ನುಆಚರಿಸುತ್ತಿರುವ ಈ ಸಂದರ್ಭದಲ್ಲಿ ಜಗತ್ತಿನ ಪ್ರತೀ 113 ಮಂದಿಯಲ್ಲಿ ಒಬ್ಬ ನಿರಾಶ್ರಿತ ಆಗಿದ್ದಾನೆ ಎಂಬ ನಡುಕ ಹುಟ್ಟಿಸುವ ಮಾಹಿತಿಯನ್ನು ವಿಶ್ವಸಂಸ್ಥೆಯ ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ.
ಪಶ್ಚಿಮೇಶ್ಯ ಮತ್ತು ಆಫ್ರಿಕನ್ ರಾಷ್ಟ್ರಗಳ ಸಂಘರ್ಷ ಅವಸ್ಥೆ ನಿರಾಶ್ರಿತರ ಸಮಸ್ಯೆಯನ್ನು ಹುಟ್ಟುಹಾಕಿದೆ. ಭಾರಿ ಪ್ರಮಾಣದಲ್ಲಿ ನಿರಾಶ್ರಿತರನ್ನು ಸೃಷ್ಟಿಸಿದೆ.
ಆಡಳಿತಗಾರರ ಅನಿಯಂತ್ರಣ,ಪ್ರಜಾಪ್ರಭುತ್ವದ ವೈಫಲ್ಯ ಇವುಗಳ ಹರಿಕಾರರ ದ್ವಂದ್ವ, ಜನರ ಪ್ರತಿಭಟನೆ, ಶಸ್ತ್ರಾಸ್ತ್ರ ಬಳಸಿ ದಮನಿಸಲು ಅಧಿಕಾರಿಗಳು ಶ್ರಮಿಸುತ್ತಿರುವುದು ನಿರಾಶ್ರಿತರ ಹರಿವಿಗೆಹರಿವಿಗೂ ವಲಸೆಗಾರರ ಹೆಚ್ಚಳಕ್ಕೂ ದಾರಿಯೊದಗಿಸಿದೆ. ಆದರೆ ಯುರೋಪ್‌ಗೆ ವಲಸೆ ಹೋಗುವುದನ್ನು ಆ ನಾಡಿನ ಜನಾಂಗೀಯವಾದಿಗಳು ವಿರೋಧಿಸುತ್ತಿದ್ದಾರೆ. ಇದು ನಿರಾಶ್ರಿತರ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಬ್ರಿಟನ್ ಅಥವಾ ಫ್ರಾನ್ಸ್‌ನ ಜನಸಂಖ್ಯೆಗಿಂತ ಎಷ್ಟೋ ಪಟ್ಟು ಹೆಚ್ಚು ನಿರಾಶ್ರಿತರು ಇದ್ದಾರೆ ಎಂದು ಜಾಗತಿಕ ಮಾನವ ಹಕ್ಕು ಹೋರಾಟಗಾರ ಫಿಲಿಪ್ಪಿನೋ ಗ್ರಾಂಟ್ ಬಹಿರಂಗಪಡಿಸಿದ್ದಾರೆ.