×
Ad

ಕಾಬೂಲ್ ಸ್ಫೋಟ: 14 ನೇಪಾಳಿ ಕಾವಲುಗಾರರ ಸಾವು

Update: 2016-06-20 22:23 IST

ಕಾಬೂಲ್, ಜೂ. 20: ಅಫ್ಘಾನಿಸ್ತಾನದಾದ್ಯಂತ ಸೋಮವಾರ ನಡೆದ ಸರಣಿ ಬಾಂಬ್ ದಾಳಿಗಳಲ್ಲಿ 23 ಮಂದಿ ಮೃತಪಟ್ಟಿದ್ದು, ಅವರಲ್ಲಿ ಹಲವಾರು ನೇಪಾಳಿ ಕಾವಲುಗಾರರೂ ಸೇರಿದ್ದಾರೆ.

ಬಂಡುಕೋರರ ವಿರುದ್ಧ ದಾಳಿ ನಡೆಸುವ ಅಮೆರಿಕ ಸೇನೆಯ ಅಧಿಕಾರವನ್ನು ಅಮೆರಿಕ ವಿಸ್ತರಿಸಿದ ದಿನಗಳ ಬಳಿಕ ಈ ದಾಳಿಗಳು ನಡೆದಿವೆ.

ಕಾಬೂಲ್‌ನಲ್ಲಿರುವ ಕೆನಡ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ 14 ನೇಪಾಳಿ ಕಾವಲುಗಾರರನ್ನೊಳಗೊಂಡ ಬಸ್ ಮೇಲೆ ಮೊದಲ ದಾಳಿ ನಡೆಯಿತು. ಈ ದಾಳಿಯಲ್ಲಿ ಎಲ್ಲ 14 ಮಂದಿ ಮೃತಪಟ್ಟರು.

ಈ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ.

ಇದಕ್ಕೂ ಮುನ್ನ ಈಶಾನ್ಯದ ರಾಜ್ಯ ಬಡಕ್‌ಶನ್‌ನ ಮಾರುಕಟ್ಟೆಯೊಂದರ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟರು ಹಾಗೂ 18 ಮಂದಿ ಗಾಯಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News