×
Ad

ಬೃಹತ್ ಭಯೋತ್ಪಾದಕ ದಾಳಿ ವಿಫಲ: ಇರಾನ್

Update: 2016-06-20 22:28 IST

ಟೆಹರಾನ್, ಜೂ. 20: ಟೆಹರಾನನ್ನು ಗುರಿಯಿರಿಸಲಾದ ‘‘ಈವರೆಗಿನ ಅತ್ಯಂತ ದೊಡ್ಡ ಭಯೋತ್ಪಾದಕ ಸಂಚ’’ನ್ನು ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ಕಾಬೂಲ್ ಸ್ಫೋಟ: 14 ನೇಪಾಳಿ ಕಾವಲುಗಾರರ ಸಾವು

ಕಾಬೂಲ್, ಜೂ. 20: ಅಫ್ಘಾನಿಸ್ತಾನದಾದ್ಯಂತ ಸೋಮವಾರ ನಡೆದ ಸರಣಿ ಬಾಂಬ್ ದಾಳಿಗಳಲ್ಲಿ 23 ಮಂದಿ ಮೃತಪಟ್ಟಿದ್ದು, ಅವರಲ್ಲಿ ಹಲವಾರು ನೇಪಾಳಿ ಕಾವಲುಗಾರರೂ ಸೇರಿದ್ದಾರೆ.

ಬಂಡುಕೋರರ ವಿರುದ್ಧ ದಾಳಿ ನಡೆಸುವ ಅಮೆರಿಕ ಸೇನೆಯ ಅಧಿಕಾರವನ್ನು ಅಮೆರಿಕ ವಿಸ್ತರಿಸಿದ ದಿನಗಳ ಬಳಿಕ ಈ ದಾಳಿಗಳು ನಡೆದಿವೆ.

ಕಾಬೂಲ್‌ನಲ್ಲಿರುವ ಕೆನಡ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ 14 ನೇಪಾಳಿ ಕಾವಲುಗಾರರನ್ನೊಳಗೊಂಡ ಬಸ್ ಮೇಲೆ ಮೊದಲ ದಾಳಿ ನಡೆಯಿತು. ಈ ದಾಳಿಯಲ್ಲಿ ಎಲ್ಲ 14 ಮಂದಿ ಮೃತಪಟ್ಟರು.

ಈ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ.

ಇದಕ್ಕೂ ಮುನ್ನ ಈಶಾನ್ಯದ ರಾಜ್ಯ ಬಡಕ್‌ಶನ್‌ನ ಮಾರುಕಟ್ಟೆಯೊಂದರ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟರು ಹಾಗೂ 18 ಮಂದಿ ಗಾಯಗೊಂಡರು.ರಾಜಧಾನಿ ಮತ್ತು ಇತರ ಪ್ರಾಂತಗಳ ಮೇಲೆ ಬಾಂಬ್ ಹಾಕಲು ಹೂಡಲಾದ ಸಂಚಿಗೆ ಸಂಬಂಧಿಸಿ ಹಲವಾರು ಶಂಕಿತರನ್ನು ಬಂಧಿಸಲಾಗಿದೆ ಎಂದು ಟಿವಿಯು ಸೋಮವಾರ ವರದಿ ಮಾಡಿದೆ.

ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಬಾಂಬ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದಿದೆ. ಬಂಧಿತರ ಹೆಸರುಗಳನ್ನು ವರದಿ ತಿಳಿಸಿಲ್ಲವಾದರೂ, ಅವರು ‘ತಕ್‌ಫಿರಿಸ್’ಗಳು ಎಂದು ಕರೆದಿದೆ.

ಇರಾನ್ ಅಧಿಕಾರಿಗಳು ಐಸಿಸ್ ಅನುಯಾಯಿಗಳನ್ನು ‘ತಕ್‌ಫಿರಿಸ್’ ಎಂಬುದಾಗಿ ಕರೆಯುತ್ತಾರೆ. ಆದಾಗ್ಯೂ, ಈ ಪ್ರಕರಣದಲ್ಲಿ ಐಸಿಸ್ ಇದೆಯೇ ಎನ್ನುವುದು ಖಚಿತವಾಗಿಲ್ಲ.

ಐಸಿಸ್ ವಿರುದ್ಧದ ಹೋರಾಟದಲ್ಲಿ ಇರಾನ್ ಇರಾಕ್ ಮತ್ತು ಸಿರಿಯಗಳಿಗೆ ನೆರವು ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News