ಅಮೀರ್ ಖಾನ್ ರಿಂದ ಸ್ಫೂರ್ತಿ ಪಡೆಯಿರಿ, ಈ ಸಲಹೆಗಳನ್ನು ಸ್ವೀಕರಿಸಿ, ನೀವೂ ಅನಗತ್ಯ ತೂಕ ಕಳಕೊಳ್ಳಿ
ಅಮೀರ್ ಖಾನ್ ತಮ್ಮ ಮುಂದಿನ ಸಿನಿಮಾ ದಂಗಲ್‌ಗಾಗಿ ತೂಕ ಬೆಳೆಸಿಕೊಂಡು ನಂತರ ಅದನ್ನು ಕಳೆದುಕೊಂಡಿದ್ದಾರೆ. ಅಷ್ಟೊಂದು ತೂಕ ಬೆಳೆಸಿದ ನಂತರ ಅದನ್ನು ಕಳೆದುಕೊಳ್ಳುವುದು ಅಮೀರ್ ಖಾನರಿಗೆ ಬಹಳ ಕಷ್ಟವಾಗಿತ್ತು. ಕೆಲವೇ ವಾರಗಳಲ್ಲಿ ಅವರು 15 ಕೇಜಿಗಳಷ್ಟು ತೂಕ ಇಳಿಸಿದ್ದಾರೆ. ಲುಧಿಯಾನದಲ್ಲಿರುವಾಗ ಅಮೀರ್ ಹೇಗೆ ತೂಕ ಕಳೆದುಕೊಂಡರು ಎನ್ನುವುದನ್ನು ಅವರಿಗೆ ರೆಸ್ಲಿಂಗ್ ತರಬೇತು ನೀಡುತ್ತಿದ್ದ ಕೃಪಾಶಂಕರ್ ಮತ್ತು ಇತರ ರೆಸ್ಲರುಗಳು ವಿವರ ನೀಡಿದ್ದಾರೆ.
ವೇಗವಾಗಿ ಮತ್ತು ಆರೋಗ್ಯಕರವಾಗಿ ತೂಕ ಕಳೆದುಕೊಳ್ಳುವ ಐದು ಸಲಹೆಗಳು ಇಲ್ಲಿವೆ.
1. ನೀವು ಸೇವಿಸುವುದಕ್ಕಿಂತ ಹೆಚ್ಚು ಕ್ಯಾಲರಿಗಳನ್ನು ಕಳಚಿಕೊಳ್ಳಿ. ನೀವು ತಿನ್ನುವ ಕ್ಯಾಲರಿಗಳಿಗಿಂತ ಹೆಚ್ಚು ಕಳೆದುಕೊಳ್ಳಲು ವ್ಯಾಯಾಮ ಮಾಡಬೇಕು.
2. ನಿಮಗೆ ವ್ಯಾಯಾಮ, ಡಯಟ್ ಮತ್ತು ವಿರಾಮದ ಸಮತೋಲನ ಬೇಕು. ಆಗಲೇ ಸ್ನಾಯುಗಳನ್ನು ಬೆಳೆಸಿಕೊಳ್ಳಬಹುದು. ತೂಕ ಕಡಿಮೆ ಮಾಡಬೇಕೆಂದರೆ ಶೇ. 50ರಷ್ಟು ವ್ಯಾಯಾಮ ಮತ್ತು ಉಳಿದ ಶೇ. 30 ಮತ್ತು ಶೇ. 20 ವಿರಾಮಕ್ಕೆ ಕೊಡಬೇಕು. ಈ ಸಮತೋಲನವೇ ಉತ್ತಮ ಆರೋಗ್ಯ ಕೊಡಲಿದೆ ಎನ್ನುತ್ತಾರೆ ಅಮೀರ್.
3. ತೂಕ ಬೆಳೆಸಿಕೊಳ್ಳಲು ಅಮೀರ್ ಮಾಂಸಾಹಾರ ಸೇವಿಸಿದ್ದರು. ತೂಕ ಇಳಿಸಲು ಸಸ್ಯಾಹಾರಿಯಾದರು. ಹೀಗಾಗಿ 30 ಕೇಜಿ ತೂಕ ಇಳಿಸಿಕೊಂಡರು. 4. ಅವರ ತೂಕವನ್ನು ನುರಿತ ವೈದ್ಯರ ಗಮನದಲ್ಲಿ ಏರುಪೇರು ಮಾಡಿಕೊಂಡಿದ್ದರು. ಪ್ರತೀ ಎರಡು ವಾರಕ್ಕೊಮ್ಮೆ ಆರೋಗ್ಯದ ಮೇಲೆ ಬೀರುವ ಪರಿಣಾಮ ಪರೀಕ್ಷಿಸಲಾಗಿದೆ.
5. ಮುಖ್ಯವಾಗಿ ಪೌಷ್ಠಿಕಾಹಾರ. ಶೇ. 20 ಆರೋಗ್ಯಕರ ಕೊಬ್ಬು, ಶೇ. 50 ಕಾರ್ಬೋಹೈಡ್ರೇಟ್ ಮತ್ತು ಶೇ. 40 ಪ್ರೊಟೀನ್ ಸೇವಿಸಿದ್ದಾರೆ.
ಕೃಪೆ: http://www.hindustantimes.com