×
Ad

ಪ್ರತೀ ಪಂಚಾಯತ್‌ನಲ್ಲಿ ಒಂದು ಆರೆಸ್ಸೆಸ್ ಚಾಲಿತ ಶಾಲೆ!

Update: 2016-06-20 23:46 IST

ಜೂನ್ 1ರಂದು ಅಸ್ಸಾಂನ ದಿನಪತ್ರಿಕೆಗಳಲ್ಲಿ ಪ್ರೌಢಶಿಕ್ಷಣ ಕೊನೆಯ ವರ್ಷದ (ಎಚ್‌ಎಸ್‌ಎಲ್‌ಸಿ) ಪರೀಕ್ಷಾ ಲಿತಾಂಶಗಳನ್ನು ಪ್ರಕಟಿಸಲಾಗಿತ್ತು. ಸುಮಾರು ನಾಲ್ಕು ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಕೆಲವೊಂದು ಪತ್ರಿಕೆಗಳ ತಲೆಬರಹಗಳಲ್ಲಿ ಒಂದು ಅಂಶ ಪ್ರತ್ಯೇಕವಾಗಿ ಕಾಣುತ್ತಿತ್ತು. ಶಂಕರದೇವ ಶಿಶು ನಿಕೇತನ ಶಾಲೆಯಲ್ಲಿ ಕಲಿತ ಮುಸ್ಲಿಂ ವಿದ್ಯಾರ್ಥಿಯೊಬ್ಬ 600 ಅಂಕಗಳಿಗೆ 590 ಅಂಕಗಳನ್ನು ಪಡೆದು ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದ. ಈ ಶಾಲೆಯನ್ನು ಆರೆಸ್ಸೆಸ್‌ನ ಶೈಕ್ಷಣಿಕ ಶಾಖೆಯಾಗಿರುವ ವಿದ್ಯಾ ಭಾರತಿ ಸಂಸ್ಥೆ ನಡೆಸುತ್ತಿದೆ. 1977ರಲ್ಲಿ ತುರ್ತುಸ್ಥಿತಿಯ ವಿರುದ್ಧ ಅಸಾಧಾರಣ ಹೋರಾಟಗಾರರನ್ನು ಸೃಷ್ಟಿಸುವ ಸಲುವಾಗಿ ಈ ಶಾಲೆಗಳು ಅಸ್ತಿತ್ವಕ್ಕೆ ಬಂದವು. ಈ ಶಾಲೆಯು, ನಾವು ಯುವಪೀಳಿಗೆಗೆ ಧರ್ಮ, ಸಂಸ್ಕ್ಪ್ರತಿ ಮತ್ತು ರಾಷ್ಟ್ರೀಯತೆ ಬಗ್ಗೆ ಶಿಕ್ಷಣ ನೀಡುತ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ.

ದೇಶಾದ್ಯಂತ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಈ ಶಾಲೆಗಳು ಅಸ್ಸಾಂನಲ್ಲಿ ‘ಸರಸ್ವತಿ ಶಿಶು ಮಂದಿರ್’ ಎಂದು ಕರೆಯಲ್ಪಡುತ್ತದೆ. 15ನೆ ಶತಮಾನದ ಅಸ್ಸಾಮ್ ಸಂತಕವಿ ಶಂಕರ್ ದೇವ ಅವರ ಹೆಸರನ್ನೇ ಆರೆಸ್ಸೆಸ್ ಇಲ್ಲಿ ತನ್ನ ಶಾಲೆಗಳಿಗೆ ಇಟ್ಟಿದೆ. 1993-94ರ ವೇಳೆಗೆ ವಿದ್ಯಾಭಾರತಿ ದೇಶಾದ್ಯಂತ ನಡೆಸುತ್ತಿರುವ ಶಾಲೆಗಳ ಸಂಖ್ಯೆ 6000 ಆಗಿತ್ತು. ಅಸ್ಸಾಂ ಒಂದರಲ್ಲೇ ಇಂತಹ ಹಲವು ನೂರು ಶಾಲೆಗಳಿವೆ. ಬಹುತೇಕ ಸರಕಾರಿ ಶಾಲೆಗಳು ಸರ್ವ ಶಿಕ್ಷ ಅಭಿಯಾನಕ್ಕೆ ಅನುದಾನದ ಕೊರತೆಯಿಂದಾಗಿ ಖಾಲಿ ತರಗತಿಗಳು ಮತ್ತು ಕೆಲಸವಿಲ್ಲದ ಶಿಕ್ಷಕರನ್ನು ಹೊಂದಿದ್ದರೆ, ವಿದ್ಯಾಭಾರತಿ ನಡೆಸುತ್ತಿರುವ ಶಾಲೆಗಳು ಬಹಳಷ್ಟು ಕಡೆಗಳಲ್ಲಿ ಕಡಿಮೆ ಆದಾಯ ಹೊಂದಿರುವ ಕುಟುಂಬದ ಮಕ್ಕಳಿಗೆ ಸಾಧಾರಣವಾದ ಶಿಕ್ಷಣವನ್ನು ಕೈಗೆಟುಕುವ ಶುಲ್ಕದಲ್ಲಿ ನೀಡುತ್ತಿದೆ.

ಉನ್ನತ ಮತ್ತು ಮಧ್ಯಮವರ್ಗವು ಇಷ್ಟಪಡುವ ಖಾಸಗಿ ಶಾಲೆಗಳಲ್ಲಿ ಬಹುತೇಕ ಶಾಲೆಗಳು ಸಿಬಿಎಸ್‌ಇ ಪಠ್ಯಕ್ರಮಕ್ಕೆ ಬದಲಿಸಿಕೊಂಡಿವೆ ಮತ್ತು ಉಳಿದ ಸರಕಾರಿ ಶಾಲೆಗಳ, ಕೆಲವು ಅಸ್ಸಾಮಿ ಮಾಧ್ಯಮ ಶಾಲೆಗಳ ಮತ್ತು ಶಂಕರ ದೇವ ಶಿಶು ನಿಕೇತನ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಸರಕಾರದ ಪರೀಕ್ಷಾ ಪದ್ಧತಿಯನ್ನು ಆಯ್ದುಕೊಂಡಿದ್ದಾರೆ. ಮುಖ್ಯವಾಗಿ, ಒಂದು ಕಾಲದಲ್ಲಿ ಅಸ್ಸಾಂನ ಅಗ್ರಮಾನ್ಯ ಪ್ರೌಢಶಾಲೆಯಾಗಿದ್ದ ಗುವಾಹಟಿಯ ಕಾಟನ್ ಕಾಲೇಜಿಯೇಟ್‌ಗಳಂತಹ ಸರಕಾರಿ ಶಾಲೆಗಳ ಮಕ್ಕಳು ಹಲವು ವರ್ಷಗಳಿಂದ ರಾಜ್ಯ ಪರೀಕ್ಷಾ ಮಂಡಳಿಯ ಅಗ್ರ 20ರ ಪಟ್ಟಿಯಲ್ಲಿ ಸ್ಥಾನಪಡೆಯಲು ವಿಲವಾಗಿದ್ದಾರೆ.
ಈ ವರ್ಷದ ಅಗ್ರಸ್ಥಾನಿ ಸಣ್ಣ ಟೀ ಅಂಗಡಿಯ ಉದ್ಯೋಗಿಯ ಮಗನಾಗಿರುವ ಸರ್ರಾಜ್ ಹುಸೈನ್‌ನನ್ನು ಲಿತಂಶದ ನಂತರ ಮಾಧ್ಯಮವೊಂದು ಸಂದರ್ಶನ ಮಾಡಿತು. ಓರ್ವ ಪ್ರತಿಭಾವಂತ ಮತ್ತು ಅಭಿವ್ಯಕ್ತಶೀಲ ಯುವಕನಾಗಿರುವ ಆತ ತನ್ನ ಶಾಲೆಯ ಆಚಾರ್ಯರಿಗೆ ಗೌರವವನ್ನು ಸೂಚಿಸಿದ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರಕಾರದ ಮುಂದಿರುವ ಮೂರು ಗಂಭೀರ ವಿಷಯಗಳ ಬಗ್ಗೆ ಕೇಳಿದಾಗ ಹುಸೈನ್ ತಿಳಿಸಿದ ಅಂಶಗಳಲ್ಲಿ ದಾಖಲೆಗಳಿಲ್ಲದ ಬಾಂಗ್ಲಾದೇಶಿ ವಲಸಿಗರನ್ನು ಹೊರಗಟ್ಟುವುದು ಒಂದಾಗಿತ್ತು. ಸಂಘಪರಿವಾರದ ಹೆಮ್ಮೆಯ ಸದಸ್ಯರಿಗೆ ತಮ್ಮ ಸಂತೋಷವನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ಲಿತಾಂಶವು ‘ಆರೆಸ್ಸೆಸ್ ಮುಸ್ಲಿಂ ವಿರೋ ಸಂಸ್ಥೆಯಾಗಿದೆ’ ಎಂಬ ಸುಳ್ಳಿನ ನೆತ್ತಿಗೆ ಹೊಡೆದಂತಿದೆ ಎಂದವರು ಹೇಳಿಕೊಂಡಿದ್ದರು.

ಅದೇ ದಿನ ರಾಜ್ಯ ಶಿಕ್ಷಣ ಸಚಿವ ಮತ್ತು ಬಿಜೆಪಿ ನೇತೃತ್ವದ ಸರಕಾರದಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ನಂತರ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರುವ ಹಿಮಂತಾ ಬಿಸ್ವಾ ಶರ್ಮಾ, ಸಂಘದ ನೂತನ ಸದಸ್ಯನಂತೆ ಹುರುಪಿನಲ್ಲಿ ‘‘ಆರೆಸ್ಸೆಸ್ ಮಾರ್ಗದರ್ಶನ ಹೊಂದಿರುವ ಶಾಲೆಗಳನ್ನು ಅಸ್ಸಾಂನ ಎಲ್ಲಾ 2,202 ಪಂಚಾಯತ್‌ಗಳಲ್ಲಿ ಸ್ಥಾಪಿಸಲಾಗು ವುದು’’ ಎಂದು ಹೇಳಿಕೆ ನೀಡಿದರು. ಖಾಸಗಿ ಶಾಲೆಯ ಸರಣಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸರಕಾರ ನೇರವಾಗಿ ಆರ್ಥಿಕ ಸಹಾಯ ನೀಡಲು ಅಥವಾ ಬೆಂಬಲಿಸಲು ಅವಕಾಶವಿಲ್ಲ ಎಂಬ ಅಂಶ ಕೂಡಾ ಅವರನ್ನು ವಿಚಲಿತಗೊಳಿಸಲಿಲ್ಲ. ಇದು ಸಂಘದ ಉತ್ಸಾಹಿಗಳು ಅದ್ಯಾವ ರೀತಿಯಲ್ಲಿ ಆಗಾಗ ತಮ್ಮ ಅಕಾರವನ್ನು ಬಳಸುವಲ್ಲಿ ಕಾನೂನಿನ ಮಿತಿಯನ್ನು ಮೀರುತ್ತಾರೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಚುನಾವಣೆಯಲ್ಲಿ ಇನ್ನಿಲ್ಲದಂತೆ ಸೋಲುಂಡಿದ್ದ ಮತ್ತು ಎಚ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆರೆಸ್ಸೆಸ್ ಶಾಲೆಯ ಯಶಸ್ಸಿನಿಂದ ಕಂಗೆಟ್ಟ ವಿರೋಧ ಪಕ್ಷವು ಶರ್ಮಾರ ಅಸಾಧಾರಣ ಮತ್ತು ಅಸಂವಿಧಾನಿಕ ಹೇಳಿಕೆಯ ಬಗ್ಗೆ ಮೌನವಾಗಿಯೇ ಉಳಿಯಿತು. ಜೂನ್ 2ರಂದು ಪ್ರಸಿದ್ಧ ಟಿವಿ ಮಾಧ್ಯಮವೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಆಯೋಜಕರು ಒಂದು ವರ್ಷ ಹಳೆಯ ನನ್ನನ್ನೊಳಗೊಂಡಿದ್ದ ವಿವಾದವೊಂದನ್ನು ಕೆದಕಿದರು. ಭಾಷಣವೊಂದರಲ್ಲಿ ಇಂಥಾ ಶಾಲೆಗಳು ಹಿಂದುತ್ವದ ಆದರ್ಶಗಳನ್ನು ಬೋಸುತ್ತವೆ. ಹಾಗಾಗಿ ಮುಸಿಮ್ ವಿರೋ ಧೋರಣೆಯನ್ನು ಹೊಂದಿವೆ ಎಂದು ನಾನು ಹೇಳಿದ ಪರಿಣಾಮವಾಗಿ ಆರೆಸ್ಸೆಸ್ ಆದರ್ಶವಾದಿಗಳು ಮತ್ತು ಬೆಂಬಲಿಗರು ನನ್ನ ಮೇಲೆ ದಾಳಿ ನಡೆಸಿದ ವಿವಾದ ಅದಾಗಿತ್ತು.

ಆ ಸಮಯದಲ್ಲಿ ಇಂತಹ ಒಂದು ಶಾಲೆಯ ಮುಂದೆ ಹಾಕಲಾಗಿದ್ದ ಲಕವೊಂದರಲ್ಲಿ ‘ಹಿಂದುತ್ವಕ್ಕೆ ನಿಷ್ಠರಾಗಿರಿ’ ಎಂದು ಬರೆಯಲಾಗಿರುವ ಸಾಕ್ಷಿಯನ್ನು ತೋರಿಸುವ ಮೂಲಕ ನಾನು ಟೀಕಾಕಾರರ ಬಾಯಿ ಮುಚ್ಚಿಸಿದ್ದೆ. ಟಿವಿ ನಿರೂಪಕ ನನ್ನ ವಿರುದ್ಧ ವಾದ ಮಾಡಲು ಹಲವು ತಜ್ಞರನ್ನು ಆಹ್ವಾನಿಸಿದ ಅವರ ಪೈಕಿ ಬಹುತೇಕರು ಸಂಘ ಪರಿವಾರದವರಾಗಿದ್ದರು. ಈ ಅತ್ಯುತ್ಸಾಹಿಗಳ ಗುಂಪು ನಿರ್ಲಕ್ಷಿಸಿದ್ದ ಈ ಚರ್ಚೆಯ ಒಂದು ಕೊರತೆ ಏನಾಗಿತ್ತೆಂದರೆ ನನ್ನ ಪ್ರತಿಕ್ರಿಯೆಯನ್ನು ಕೇಳಲೂ ಇಲ್ಲ ಅಥವಾ ಹಿಂದಿನ ದಾಖಲೆಗಳಿಂದ ಮರುಪ್ರಸ್ತಾಪಿಸಿದ್ದೂ ಇಲ್ಲ. ಟಿವಿ ನಿರೂಪಕನಂತೂ ನನ್ನಂತಹ ಕೆಟ್ಟ ಜಾತ್ಯತೀತವಾದಿಗಳು ಆರೆಸ್ಸೆಸ್ ಶಾಲೆಗಳ ಬಗ್ಗೆ ಕೂಗೆಬ್ಬಿಸುತ್ತವೆಯೇ ಹೊರತು ಡಾನ್ ಬಾಸ್ಕೊ ಮುಂತಾದ ಕ್ರೆಸ್ತ ಮಿಷನರಿ ಶಾಲೆಗಳು ಕ್ರೆಸ್ತಧರ್ಮವನ್ನು ಹರಡುತ್ತಿರುವ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ವಾದಿಸಿದ. ಆದರೆ ಕ್ರೆಸ್ತ ಮಿಷನರಿ ಶಾಲೆಗಳು ತರಗತಿಗಳ ಒಳಗೆ ಕ್ರೆಸ್ತ ದೇವತಾಶಾಸವನ್ನು ಬೋಸದಂತೆ ಎಚ್ಚರವಹಿಸುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಈ ಘಟನೆಯನ್ನು ನಾನು ಜನಪ್ರಿಯ ಟಿವಿ ಮಾಧ್ಯಮಗಳ ಒಂದು ಗುಂಪು ಮಾಡುತ್ತಿರುವ ಪಕ್ಷಪಾತಕ್ಕೆ ಉದಾಹರಣೆಯಾಗಿ ತಿಳಿಸಿದೆ ಅಷ್ಟೇ.

ತನ್ನ ಜಾತ್ಯತೀತ ವಿಶ್ವಾಸಾರ್ಹತೆಯು ಸತ್ಯ ಎಂದು ಸಂಘ ಪ್ರತಿಪಾದಿಸಬಲ್ಲುದೇ? ನನಗೆ ತಿಳಿದ ಹಾಗೆ ಇಲ್ಲ. ಟಿವಿ ಚರ್ಚೆಯಲ್ಲಿ ಭಾಗಿಯಾಗಿದ್ದ ಮತ್ತು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಪ್ರತಿನಿಯಾಗಿರುವ ಸಮುದ್ರ ಗುಪ್ತ ಕಶ್ಯಪ್ ತಮ್ಮ ಒಂದು ಅಂಕಣದಲ್ಲಿ, ‘‘ಹುಸೈನ್‌ನ ತಂದೆ ಆತನನ್ನು ದಾಖಲಿಸಿದ ಶಾಲೆಯ ಪ್ರಧಾನ ಆಚಾರ್ಯರು (ಮುಖ್ಯೋಪಾಧ್ಯಾಯರು) ನಿಮ್ಮ ಮಗ ಗಾಯತ್ರಿ ಮಂತ್ರ ಮತ್ತು ಸರಸ್ವತಿ ವಂದನಾದಂತಹ ವಿವಿಧ ಶ್ಲೋಕಗಳನ್ನು ಹೇಳಿದರೆ ನಿಮಗೇನಾದರೂ ಅಭ್ಯಂತರವಿದೆಯೇ ಎಂದು ಕೇಳಿದ್ದರು’’ ಎಂದು ಬರೆಯುತ್ತಾರೆ. ಇದು ಇಂತಹ ಶಾಲೆಗಳ ಹಿಂದುತ್ವ ಬೋಧನೆಗೆ ದೃಢ ಮತ್ತು ಸ್ಪಷ್ಟ ಸಾಕ್ಷಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಹಿಂದುತ್ವ ಸಿದ್ಧಾಂತವನ್ನು ಬೆಂಬಲಿಸುವ ಮುಸ್ಲಿಮರನ್ನು ಸ್ವಾಗತಿಸಲು ಆರೆಸ್ಸೆಸ್ ಸಿದ್ಧವಿದೆ. ಇದು ಬೃಹತ್ ಸಂಖ್ಯೆಯ ಮುಸ್ಲಿಮರಿಗೆ ಸರಿಕಾಣುವುದಿಲ್ಲ, ಖಂಡಿತವಾಗಿಯೂ ಇವರೆಲ್ಲ ಮುಸ್ಲಿಂ ಮತಾಂಧರಲ್ಲ. ಹಾಗಾದರೆ ಹಿಂದುತ್ವವನ್ನು ಬೆಂಬಲಿಸದ ಮುಸ್ಲಿಮರ ಬಗ್ಗೆ ಆರೆಸ್ಸೆಸ್‌ನ ನಿಲುವೇನು? ಈ ಪ್ರಶ್ನೆಯನ್ನು ಉತ್ತರಿಸಲು ದೇಶಾದ್ಯಂತ ಸಾಕಷ್ಟು ಪುರಾವೆಗಳು ಲಭಿಸುತ್ತವೆ.
                                                                                                                                ಕೃಪೆ: thewire.in

Writer - ಹಿರೆನ್ ಗೊಹೈನ್

contributor

Editor - ಹಿರೆನ್ ಗೊಹೈನ್

contributor

Similar News