47 ವರ್ಷದ ಮಹೇಶ್ ಸವಾನಿಗೆ 472 ಹೆಣ್ಣು ಮಕ್ಕಳು

Update: 2016-06-20 18:22 GMT

ಅಪ್ಪಂದಿರ ದಿನದಂದು ಉದ್ಯಮಿ ಮಹೇಶ್ ಸಿವಾನಿಗೆ 472 ಹೆಣ್ಣು ಮಕ್ಕಳಿಂದ ಶುಭಾಶಯ ಬಂದಿದೆ. ಈ ಮಹಿಳೆಯರಿಗೆ ವಾಸ್ತವದಲ್ಲಿ ತಂದೆಯಿಲ್ಲ. ಸವಾನಿ ಅವರ ತಂದೆಯ ಸ್ಥಾನದಲ್ಲಿ ನಿಂತು ಕಳೆದ ಕೆಲ ವರ್ಷಗಳಲ್ಲಿ ಅವರ ಮದುವೆ ಮಾಡಿದ್ದಾರೆ.

47 ವರ್ಷದ ಸವಾನಿ ತಮ್ಮ ಸಹೋದರನ ಮರಣದ ನಂತರ ಆತನ ಇಬ್ಬರು ಹೆಣ್ಣುಮಕ್ಕಳ ಕನ್ಯಾದಾನವನ್ನು 10 ವರ್ಷಗಳ ಹಿಂದೆ ಮಾಡಿದ್ದರು. ಈ ಘಟನೆಯು ಅವರನ್ನು ಅಂತಹ ತಂದೆಯಿಲ್ಲದ ಹಲವು ಹೆಣ್ಣುಮಕ್ಕಳ ಜೀವನದ ಬಗ್ಗೆ ಯೋಚಿಸುವಂತೆ ಮಾಡಿತು. ಅವರಿ ಅಂತಹ ಬಾಲಕಿಯರ ಬಗ್ಗೆ ಯೋಚಿಸಲು ಆರಂಭಿಸಿ, 2008ರಿಂದ ಹೆಣ್ಣುಮಕ್ಕಳ ಮದುವೆ ಮಾಡಿ ಅವರ ವಿವಾಹಿತ ಜೀವನದುದ್ದಕ್ಕೂ ನೆರವಾಗಲಾರಂಭಿಸಿದರು. ಅಂದಿನಿಂದ ವಾರ್ಷಿಕವಾಗಿ ಅವರು ಮದುವೆಗಳನ್ನು ಆಯೋಜಿಸುತ್ತಾರೆ. ಸವಾನಿ ಅವರು ಉದ್ಯಮ, ವಜ್ರಗಳು ಮತ್ತು ಶಾಲೆಗಳಲ್ಲಿ ಔದ್ಯಮಿಕ ಆಸಕ್ತಿ ಹೊಂದಿದವರು. ಭಾವನಗರದ ರಾಪರ್ಡಾ ಗ್ರಾಮದವರು. ಅವರ ತಂದೆ ವಲ್ಲಭಾಬಾಯಿ 40 ವರ್ಷಗಳ ಹಿಂದೆ ಈ ನಗರಕ್ಕೆ ಬಂದು ವಜ್ರಗಳ ಪಾಲಿಶಿಂಗನ್ನು ಕಲಿತು ನಿಧಾನವಾಗಿ ಒಂದು ಘಟಕದ ಮಾಲೀಕರಾದರು. ಈಗ ಕುಟುಂಬವು ಶ್ರೀಮಂತವಾಗಿದೆ ಮತ್ತು ಸವಾನಿ ಪ್ರತೀ ಮಗಳ ಮದುವೆಗೂ ರು. 4 ಲಕ್ಷ ಖರ್ಚು ಮಾಡುತ್ತಾರೆ.
ಪತಿಯನ್ನು ಕಳೆದುಕೊಂಡ ಮಹಿಳೆಗೆ ತನ್ನ ಮಗಳ ಮದುವೆಗೆ ಹಣ ಹೊಂದಿಸುವುದು ಬಹಳ ಸವಾಲಿನ ಕೆಲಸವಾಗಿರುತ್ತದೆ ಎನ್ನುತ್ತಾರೆ ಸವಾನಿ. ಚಿನ್ನ ಮತ್ತು ಬೆಳ್ಳಿ ಆಭರಣಗಳ ಜೊತೆಗೆ ಮಗಳಿಗೆ ಬಟ್ಟೆಗಳು, ಪಾತ್ರೆಗಳು ಮತ್ತು ತಾಂತ್ರಿಕ ಸರಕುಗಳನ್ನೂ ಅವರು ಹೊಸ ಸಂಸಾರ ಮಾಡುವ ಮೊದಲು ಕೊಡುತ್ತಾರೆ. 2016ರಲ್ಲಿ ಸುಮಾರು 216 ಹೆಣ್ಣು ಮಕ್ಕಳು ಮದುವೆಗೆ ಸವಾನಿಯ ನೆರವು ಪಡೆದಿದ್ದಾರೆ. ಅವರು ಯಾವುದೇ ಧರ್ಮ ಅಥವಾ ಜಾತಿ ಎಂದು ತಾರತಮ್ಯ ಮಾಡುವುದೂ ಇಲ್ಲ.
ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ನಾಹೀದಾ ಬಾನು 2014ರಲ್ಲಿ ಆರಿಫ್ ಅವರನ್ನು ಮದುವೆಯಾದರು. ಮಹೇಶ್ ಪಾಪ ನನ್ನ ತಂದೆಗಿಂತಲೂ ಮಿಗಿಲು. ಜಗತ್ತಿನ ಪ್ರತೀ ಹೆಣ್ಣುಮಗಳಿಗೂ ಅಂತಹ ತಂದೆ ಸಿಗಬೇಕು ಎಂದು ನಾನು ಆಶಿಸುತ್ತೇನೆ ಎನ್ನುತ್ತಾರೆ ನಾಹೀದಾ.
ಆರು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿರುವ ಹೀನಾ ಕಥಿರಿಯ 2015ರಲ್ಲಿ ಮದುವೆಯಾದರು. ಮಹೇಶ್ ಪಾಪಾರಿಗೆ ಒಂದು ಸಂದೇಶ ಕೊಟ್ಟರೆ ನೆರವಿಗೆ ಧಾವಿಸುತ್ತಾರೆ ಎನ್ನುತ್ತಾರೆ ಹೀನಾ.

http://www.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News