×
Ad

ಮಾದರಿ ಕ್ರಮ

Update: 2016-06-21 23:19 IST

ಮಾನ್ಯರೆ,
ರಾಜ್ಯ ಸರಕಾರಕ್ಕೆ ಹೊಸದಾಗಿ ಸೇರ್ಪಡೆ ಗೊಂಡ ಬಸವರಾಜ ರಾಯರೆಡ್ಡಿಯವರು, ಸರಕಾರದಿಂದ ತನಗೆ ಸಿಗುವ ವೇತನ, ಮನೆ ಬಾಡಿಗೆ ಮತ್ತು ರೈಲು ಪ್ರಯಾಣ ಭತ್ತೆ ಸ್ವೀಕರಿಸುವುದಿಲ್ಲವೆಂದು ನಿರ್ಧರಿಸಿದ್ದು ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ.
ಸಚಿವರಿಗೆ ತಿಂಗಳಿಗೆ ಸಿಗುವ 75,000 ರೂ. ಸಂಬಳವಲ್ಲದೆ, ಮನೆ ಬಾಡಿಗೆ 1ಲಕ್ಷ ರೂ. ಸಿಗುತ್ತದೆ. ಅಷ್ಟೇ ಅಲ್ಲದೆ ರೈಲ್ವೆ ಪ್ರಯಾಣ ಭತ್ತೆಯೂ ಹಲವು ಸಾವಿರ ರೂ.ಗಳಾಗಿರುತ್ತದೆ.
ಹಾಗಾಗಿ ಇವುಗಳನ್ನು ತ್ಯಜಿಸುವುದರ ಮೂಲಕ ರಾಜ್ಯದ ಬೊಕ್ಕಸಕ್ಕೆ ಒಂದಿಷ್ಟಾದರೂ ಉಳಿತಾಯವಾಗುತ್ತದೆ. ಇದೇ ಮೇಲ್ಪಂಕ್ತಿಯನ್ನು ಇತರ ಜನಪ್ರತಿನಿಧಿಗಳೂ ಅನುಸರಿಸಿದರೆ ಸರಕಾರಕ್ಕೆ ಒಂದಿಷ್ಟು ಹೊರೆ ಕಡಿಮೆಯಾದೀತು.

Writer - ಕೆ. ಆರ್. ನಾಯಕ್, ಬೆಂಗಳೂರು

contributor

Editor - ಕೆ. ಆರ್. ನಾಯಕ್, ಬೆಂಗಳೂರು

contributor

Similar News