ಮ್ಯಾನ್‌ಮಾರ್ ತೀವ್ರವಾದಿಗಳಿಂದ ಹೊಸ ಶಾಲೆ: ಆತಂಕ ವ್ಯಕ್ತಪಡಿಸಿದ ಹ್ಯೂಮನ್ ರೈಟ್ಸ್‌ವಾಚ್
ಯಾಂಗೂನ್, ಜೂನ್ 22: ಸಾವಿರಾರು ಮಂದಿಯ ಕಗ್ಗೊಲೆಗೆ ಹಾಗೂ ಹತ್ತುಸಾವಿರಕ್ಕೂ ಅಧಿಕ ಮಂದಿಯ ವಲಸೆಗೆ ಕಾರಣವಾದ, ಮುಸ್ಲಿಮರ ವಿರುದ್ಧ ದ್ವೇಷದೊಂದಿಗೆ ವರ್ತಿಸುತ್ತಿರುವ ಮ್ಯಾನ್‌ಮಾರ್‌ನ ತೀವ್ರವಾದಿ ಬುದ್ಧ ಸಂಘಟನೆ ಮಾಬಾತಾ ಶಾಲೆ ಆರಂಭಿಸಿದೆ.
ಇವರು ಸ್ಥಾಪಿಸಿದ ಹೈಸ್ಕೂಲ್‌ನಲ್ಲಿ ಬೌದ್ಧ ಧರ್ಮದ ಮಕ್ಕಳಿಗೆ ಮಾತ್ರ ಪ್ರವೇಶ ಇದ್ದು ಈ ನಿಟ್ಟಿನಲ್ಲಿ ಹ್ಯೂಮನ್ ರೈಟ್ಸ್ ವಾಚ್ ಮ್ಯಾನ್ಮಾರ್ ಸರಕಾರಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಬೌದ್ಧಸನ್ಯಾಸಿಗಳ ಆಶ್ರಮದ ಉಸ್ತುವಾರಿಯ ವಿದ್ಯಾಸಂಸ್ಥೆಗಳು ದೇಶ ಶೇ.90ರಷ್ಟು ಸಾಕ್ಷರತೆಯನ್ನು ಸಾಧಿಸಲು ಶತಮಾನಗಳಿಂದ ಮುಖ್ಯಪಾತ್ರನಿರ್ವಹಿಸಿವೆ. ಎಲ್ಲ ಧರ್ಮದ ವಿದ್ಯಾರ್ಥಿಗಳು ಇವರ ಈ ಶಾಲೆಗೆ ಬರುತ್ತಾರೆ. ಇಲ್ಲಿ ಬುದ್ಧ ದಮ್ಮವನ್ನು ಕಲಿಸುವುದಿಲ್ಲ ಎಂದು ಸಿಂಚಿಯಾಂಗ್ ಟೌನ್‌ಶಿಪ್ ಉಯಿಂಟೊ ಆಶ್ರಮದ ಓರ್ವ ಅಧಿಕಾರಿ ಅಶಿನ್ ಮಗಾಯಿಂಗ್ ಹೇಳುತ್ತಾರೆ.
5.7 ಎಕರೆ ವಿಸ್ತಾರದಲ್ಲಿ ಆರಂಭಗೊಂಡ ಮಹಾವ್ ತಡರ್ ಹೈಸ್ಕೂಲ್‌ಗೂ ಮಾಬಾತಾಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಂಘಟನೆಯ ವಕ್ತಾರ ತುರೆನ್ ಸೋ ಹೇಳಿದ್ದಾರೆ. ಪಾರ್ಟಿಯ ಒಡೆತನದಲ್ಲಿರುವ ಸ್ಥಳದಲ್ಲಿ ಐದು ಅಂತಸ್ತಿನ ಶಾಲೆಯನ್ನು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಸಾಹಾದಾವ್ ಎಂಬ ವ್ಯಕ್ತಿಯ ಕನಸಿನಂತೆ ನಿರ್ಮಿಸಲಾಗಿದೆ ಎಂದು ವಕ್ತಾರ ಸ್ಪಷ್ಟಪಡಿಸಿದ್ದಾರೆ.