ಸೌದಿಗೆ ಈಜಿಪ್ಟ್ ದ್ವೀಪಗಳ ಒಡೆತನ ಹಕ್ಕು: ಈಜಿಪ್ಟ್ ನ್ಯಾಯಾಲಯದಿಂದ ರದ್ದು
ಕೈರೊ, ಜೂನ್, 22: ಸೌದಿ ಅರೇಬಿಯ ಮತ್ತು ಈಜಿಪ್ಟ್‌ಗಳ ನಡುವಿನ ಗಡಿಒಪ್ಪಂದವನ್ನು ರದ್ದು ಪಡಿಸಿನ್ಯಾಯಾಲಯ ನೀಡಿದ ತೀರ್ಪನ್ನ್ಧು ಈಜಿಪ್ಟ್ ಸರಕಾರ ವಿರೋಧಿಸಿದೆ. ಸೌದಿಯೊಂದಿಗಿನ ಒಪ್ಪಂದ ರದ್ದುಗೊಳಿಸಿದ್ದಲ್ಲದೆ. ಕೆಂಪು ಸಮುದ್ರದ ತಿರಾನ್, ಸನಾಫೀರ್ ದ್ವೀಪಗಳ ಒಡೆತನದ ಹಕ್ಕು ಸೌದಿಯದ್ದಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಸರಕಾರ ತೀರ್ಪಿನ ವಿರುದ್ಧ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ.
ಈ ಕುರಿತು ಪ್ರಾಥಮಿಕ ತೀರ್ಪು ಈಗ ಬಂದಿದೆ. ಅಂತಿಮ ತೀರ್ಪು ಈಜಿಪ್ಟ್‌ನ ಅಡ್ಮಿಸ್ಟ್ರೇಟಿವ್ ಸುಪ್ರೀಂ ಕೋರ್ಟ್ ನೀಡಲಿದೆ ಎಂದು ಅಲ್‌ಜಝೀರಾ ವರದಿ ಮಾಡಿದೆ.
ಸಲ್ಮಾನ್ ದೊರೆ ಕೈರೊ ಸಂದರ್ಶಿಸಿದ್ದ ಎಪ್ರಿಲ್ ತಿಂಗಳಲ್ಲಿ ಎರಡು ದ್ವೀಪಗಳ ಒಡೆತನದ ಹಕ್ಕನ್ನು ಈಜಿಪ್ಟ್ ಸೌದಿಗೆ ವಹಿಸಿಕೊಟ್ಟು ಒಪ್ಪಂದ ಮಾಡಿಕೊಂಡಿತ್ತು. ಈಜಿಪ್ಟ್‌ನಲ್ಲಿ ಬಹುದೊಡ್ಡ ಪ್ರತಿಭಟನೆಗೆ ಕಾರಣವಾದ ಒಪ್ಪಂದ ಇದಾಗಿತ್ತು. ಅದೇ ವೇಳೆ ಸೌದಿ ಅರೇಬಿಯದ ಸ್ಥಾಪಕ ದೊರೆ ಅಬ್ದುಲ್ ಅಝೀರ್ ಅಲೂಸಊದ್ ಆಗ್ರಹಿಸಿದ ಪ್ರಕಾರ 1950ರಿಂದ ಈಜಿಪ್ಟ್‌ಗೆ ಎರಡು ದ್ವೀಪಗಳ ಸಂರಕ್ಷಣೆಯ ಹೊಣೆ ಮಾತ್ರ ಇದ್ದುದು ಎಂದು ಹೇಳಿ ಈಜಿಪ್ಟ್ ಸರಕಾರ ಪ್ರತಿಭಟನೆಗೆ ಉತ್ತರ ನೀಡುತ್ತಿದೆ. ಒಪ್ಪಂದದ ಮೂಲಕ ನಿರ್ಮಾಣವಾಗಲಿರುವ ವಿಶೇಷ ಆರ್ಥಿಕ ವಲಯದಿಂದ ಈಜಿಪ್ಟ್‌ಗೆ ಹೆಚ್ಚಿನ ಆದಾಯ ಬರಲಿದೆ ಎಂದು ಈಜಿಪ್ಟ್ ಸರಕಾರ ವಾದಿಸುತ್ತಿದೆ.