ಮಾಲ್ಡೀವ್ಸ್ ಉಪಾಧ್ಯಕ್ಷರಾಗಿ ಅಬ್ದುಲ್ಲ ಜಿಹಾದ್ ನೇಮಕ
Update: 2016-06-23 11:33 IST
ಕೊಲಂಬೊ, ಜೂನ್ 23: ಮಾಲ್ಡೀವ್ಸ್ ನಲ್ಲಿ ಜೈಲಿಪಾಲಾಗಿರುವ ಅಹ್ಮದ್ ಅದೀಬ್‌ರ ಬದಲಿಗೆ ಅಬ್ದುಲ್ಲ ಜಿಹಾದ್‌ರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. 2013ರ ಅಕ್ಟೋಬರ್ 23ಕ್ಕೆ ಅಧಿಕಾರಕ್ಕೇರಿದ ಅಬ್ದುಲ್ಲ ಯಮೀನ್‌ರ ಸರಕಾರದ ಮೂರನೆ ಉಪಾಧ್ಯಕ್ಷರಾದ ಜಿಹಾದ್ ಈ ಮೊದಲು ಹಣಕಾಸು ಸಚಿವರಾಗಿದ್ದರು.
ತನ್ನ ಹತ್ಯೆಗೆ ಯೋಜನೆ ಹಾಕಿದ್ದರೆಂದು ಈ ಹಿಂದೆ ಉಪಾಧ್ಯಕ್ಷ ಅಹ್ಮದ್ ಅದೀಬ್‌ರನ್ನು ಅಧ್ಯಕ್ಷ ಅಬ್ದುಲ್ಲ ಯಮೀನ್ ಸ್ಥಾನಭ್ರಷ್ಟಗೊಳಿಸಿ ಜೈಲಿಗೆ ಹಾಕಿದ್ದರು. ಯಮೀನ್ ಮತ್ತು ಕುಟುಂಬ ಹೋಗುತ್ತಿದ್ದ ಬೋಟ್‌ನಲ್ಲಿ ಅದೀಬ್ ಬಾಂಬ್ ಇರಿಸಿದ್ದರೆಂದು ಆರೋಪಿಸಲಾಗಿತ್ತು. ಅವಘಡದಿಂದ ಯಮೀನ್ ಪಾರಾಗಿದ್ದರೂ ಅವರ ಪತ್ನಿ ಮತ್ತು ಸಹಾಯಕಿ ಗಾಯಗೊಂಡಿದ್ದರು. ಅದೀಬ್ 25ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.