×
Ad

ಫೇಸ್‌ಬುಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸೌದಿ ಯುವರಾಜ

Update: 2016-06-23 12:56 IST

 ಜಿದ್ದಾ, ಜೂ.23: ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಬುಧವಾರ ಫೇಸ್‌ಬುಕ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದರು ಹಾಗೂ ಕಂಪೆನಿಯ ಮುಖ್ಯಸ್ಥ ಹಾಗೂ ಸಹ-ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್‌ರೊಂದಿಗೆ ಮಾತುಕತೆ ನಡೆಸಿದರು.

ಅಮೆರಿಕ ಪ್ರವಾಸದಲ್ಲಿರುವ ಸೌದಿಯ ಯುವರಾಜ ಸಲ್ಮಾನ್ ಸಿಲಿಕಾನ್‌ವ್ಯಾಲಿಯ ಪ್ರಮುಖ ತಂತ್ರಜ್ಞಾನ ಕಂಪೆನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ವಿಶನ್ 2030ರ ಭಾಗವಾಗಿ ತಂತ್ರಜ್ಞಾನದ ವರ್ಗಾವಣೆಯ ನೆರವಿಗೆ ಹಾಗೂ ತರಬೇತಿಯ ಹೆಚ್ಚಳಕ್ಕೆ ಪ್ರಿನ್ಸ್ ಮುಹಮ್ಮದ್ ಅವರು ಮೈಕ್ರೊಸಾಫ್ಟ್ ಕಾರ್ಪೊರೇಶನ್ ಇಂಟರ್‌ನ್ಯಾಶನಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋಗೆ ಭೇಟಿ ನೀಡಿರುವ ಸೌದಿಯ ರಾಜಕುಮಾರ ಸಿಸ್ಕೋ ಸಿಸ್ಟಮ್ಸ್ ಹಾಗೂ ಸೀವರ್ಲ್ಡ್ ಪಾರ್ಕ್ ಹಾಗೂ ಎಂಟರ್‌ಟೈನ್‌ಮೆಂಟ್‌ನೊಂದಿಗೆ ಸಭೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News