ತನಗೆ ಗುಂಡಿಕ್ಕಿದವನ ಮಗನಿಗೆ ಏನು ಮಾಡಿತು ಗೊತ್ತೇ ಈ ಮೊಸಳೆ ?

Update: 2016-06-23 08:28 GMT

ಫ್ಲೋರಿಡಾ, ಜೂ.23: ತನ್ನ ತೋಟದಲ್ಲಿ ಸಾಕು ಪ್ರಾಣಿಗಳಿಗೆ ತೊಂದರೆ ಕೊಡುತ್ತಿದ್ದ ಮೊಸಳೆಯೊಂದಕ್ಕೆ 74 ವರ್ಷದ ರೆಜಿನಾಲ್ಡ್ ಬ್ಲಾಂಟನ್ ಗುಂಡಿಕ್ಕಿದ್ದರೆ, ಆ ಮೊಸಳೆ ತನಗೆ ಗುಂಡಿಕ್ಕಿದ್ದಕ್ಕೆ ಪ್ರತೀಕಾರವೆಂಬಂತೆ ಬ್ಲಾಂಟನ್‌ನ 58 ವರ್ಷದ ಪುತ್ರ ಜಾಕಿ ಹಿಲ್ಡ್ರೆತ್ ಅದೇ ಪ್ರದೇಶಕ್ಕೆ ಬಂದಾಗ ಆ ಮೊಸಳೆ ಆತನ ಮೇಲೆ ದಾಳಿ ನಡೆಸಿ ಆತನ ಕಾಲಿಗೆ ಕಚ್ಚಿದೆ.

ಬ್ಲಾಂಟನ್ ತಾನು ಗುಂಡಿಕ್ಕಿದ್ದ ಸುಮಾರು 300 ಪೌಂಡ್ ತೂಕದ ಮೊಸಳೆ ಸತ್ತಿತೆಂದೇ ತಿಳಿದಿದ್ದ. ಆದರೆ ಆತನ ಪುತ್ರನನ್ನು ನೋಡಿದ ಕೂಡಲೇ ಮೊಸಳೆ ಆತನತ್ತ ಹಾರಿತ್ತು. ಜಾಕಿಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಹಾಗೂ ಆತನ ಸ್ಥಿತಿ ಸುಧಾರಿಸುತ್ತಿದೆಯೆಂದು ತಿಳಿದು ಬಂದಿದೆ.

ಆದರೆ ವನ್ಯಪ್ರಾಣಿ ಸಂರಕ್ಷಣಾ ಆಯೋಗದ ಅಧಿಕಾರಿಗಳು ಈ ಘಟನೆಯ ಬಗ್ಗೆ ತಮ್ಮದೇ ಆದ ಶಂಕೆಗಳನ್ನು ವ್ಯಕ್ತಪಡಿಸಿದ್ದಾರೆ. ‘‘ಮೊಸಳೆಗಳು ಮಾನವರನ್ನು ಕಚ್ಚುವುದು ಬಹಳ ವಿರಳ. ಅಲ್ಲಿ ಏನು ನಡೆಯಿತೆನ್ನುವುದು ನಮಗೆ ಬೇಕಾಗಿದೆ,’’ ಎಂದು ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾಮಾನ್ಯವಾಗಿ ಮೊಸಳೆಗಳು ಜನರನ್ನು ನೋಡಿದರೆ ಭಯಗೊಳ್ಳುತ್ತವೆ. ಆದರೆ ಈ ಘಟನೆ ನಡೆದಾಗ ಮೊಸಳೆ ಹಸಿದಿತ್ತಾದರೆ ಆ ವ್ಯಕ್ತಿಯ ಕಾಲಿಗೆ ಅದು ಕಚ್ಚಿರಬಹುದು ಎಂದು ಆ ಅಧಿಕಾರಿ ತಿಳಿಸಿದರು.

ಒರ್ಲಾಂಡೋದ ಡಿಸ್ನಿ ರಿಸಾರ್ಟ್ ನಲ್ಲಿ ಮಗುವೊಂದನ್ನು ಮೊಸಳೆ ಎಳೆದುಕೊಂಡು ಹೋದ ದುರ್ಘಟನೆಯ ನಂತರ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News