ಭಾರತದ ಯುವ ಐಎಎಸ್ ಅಕಾರಿಗಳನ್ನು ಹೇಗೆ ಪಳಗಿಸುತ್ತಿದೆ ಸಂಘ ಪರಿವಾರ?
ಇತ್ತೀಚೆಗಿನ ವರದಿಗಳ ಪ್ರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ದಿಲ್ಲಿಯಲ್ಲಿ ಜುಲೈ 17ರಂದು ಯಶಸ್ವೀ ನಾಗರಿಕ ಸೇವಾ ಅಭ್ಯರ್ಥಿಗಳಿಗೆ ಭಾಷಣ ಕೊಡಲಿದ್ದಾರೆ. ಅದರಲ್ಲಿ ಅವರು ರಾಷ್ಟ್ರೀಯವಾದಿ ಕಲ್ಪನೆಗಳ ಬಗ್ಗೆಯೇ ಮಾತನಾಡಲಿದ್ದಾರೆ ಎನ್ನುವುದು ದೊಡ್ಡ ಅಚ್ಚರಿಯೇನಲ್ಲ. ದಿಲ್ಲಿ ಮೂಲದ ಸಂಸ್ಥೆ ‘ಸಂಕಲ್ಪ್’ನಾಗರಿಕ ಸೇವೆಗಳ ಮೂಲಕ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ನೆರವಾಗಬಲ್ಲ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಅವರಲ್ಲಿ ನಿಜವಾದ ಭಾರತೀಯ ಮೌಲ್ಯಗಳು ಮತ್ತು ಗುಣಗಳನ್ನು ತುಂಬುತ್ತದೆ. ಈ ಸಂಸ್ಥೆ ಈಗಾಗಲೇ ನಾಗರಿಕ ಸೇವೆಯಲ್ಲಿ ತೊಡಗುವವರಿಗೆ ಪಾಠ ಮಾಡುವುದು, ಟ್ಯುಟೋರಿಯಲ್ ನಡೆಸುವುದು, ಅಣಕು ಸಂದರ್ಶನದಂತಹ ತರಬೇತಿ ನೀಡುತ್ತಾ ಎರಡು ದಶಕಗಳನ್ನು ಪೂರ್ಣಗೊಳಿಸಿದೆ.
ಈ ವರ್ಷಗಳಲ್ಲಿ ನೂರಾರು ಅಭ್ಯರ್ಥಿಗಳಿಗೆ ಸಂಸ್ಥೆ ಭಾರತೀಯ ಆಡಳಿತಶಾಹಿಯನ್ನು ಸೇರುವ ಕನಸು ಸಾಕಾರವಾಗಲು ನೆರವಾಗಿದೆ. ಸಂಸ್ಥೆಯು ಸಂಘಪರಿವಾರದ ಭಾಗವಾಗಿದೆ ಮತ್ತು ಅದು ಮುಖ್ಯ ಸಂಘಟನೆಯ ಜೊತೆಗೆ ತಳಕು ಹಾಕಿಕೊಂಡಿರುವುದು ಸಾಂಕೇತಿಕವಾಗಿಯೇ ವಿನಾ ಸಾಂಸ್ಥಿಕವಾಗಿಯಲ್ಲ.
ಆರೆಸ್ಸೆಸ್ ಜೊತೆಗೆ ಸೇರದೆಯೇ ಬಿಜೆಪಿ, ವಿಎಚ್‌ಪಿ, ಭಾರತೀಯ ಮಜ್ದೂರ್ ಸಂಘ ಅಥವಾ ಎಬಿವಿಪಿಯಂತೆಯೇ ‘ಸಂಕಲ್ಪ್’ ಸಂಘ ಪ್ರೇರಿತ ಸಂಸ್ಥೆಗಳೆಂದು ಗುರುತಿಸುವ ಹಲವಾರು ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಗಳು ಮತ್ತು ಸಂಘಟನೆಗಳು ಸಾರ್ವಜನಿಕವಾಗಿ ಗಮನಕ್ಕೆ ಬರುವವರೆಗೂ ಅವುಗಳು ಜಗತ್ತಿಗೆ ಅಪರಿಚಿತವಾಗಿಯೇ ಇರುತ್ತವೆ. ಮೌನವಾಗಿ ಆರೆಸ್ಸೆಸ್ ಭೂತವನ್ನು ಹರಡುತ್ತಿರುತ್ತವೆ.
1986ರಲ್ಲಿ ಉತ್ತರ ಭಾರತದ ಹಲವು ಪಟ್ಟಣ ಮತ್ತು ನಗರಗಳಲ್ಲಿ ಹಲವಾರು ಶಾಲೆಗಳನ್ನು ಆರಂಭಿಸಿದ ಸಂಘಟನೆ ಶಾಲಾ ಅಧ್ಯಾಪಕರಿಗೂ ತರಬೇತಿ ನೀಡಿ ಅವರಲ್ಲಿ ರಾಷ್ಟ್ರೀಯ ಭಾವವನ್ನು ಸಣ್ಣ ವಯಸ್ಸಿನಲ್ಲಿಯೇ ತುಂಬಲು ಪ್ರಯತ್ನಿಸಿತ್ತು. ಅದೇ ಸಂಕಲ್ಪ1990ರಲ್ಲಿ ಬದಲಾಗಿ ನಾಗರಿಕ ಸೇವಾ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆ ಈಗ ದೈತ್ಯವಾಗಿ ಬೆಳೆದಿದೆ ಮತ್ತು ಜನರಲ್ ಸ್ಟಡೀಸ್ ತರಬೇತಿ ನೀಡಲು ರೂ. 30,000 ಪಡೆಯುತ್ತದೆ. ಜೊತೆಗೆ ತೆರಿಗೆಯೂ ಸೇರಿರುತ್ತದೆ. ಮುಖ್ಯ ವಿಷಯ ಕಲಿಸಲು ರೂ. 20,000 ಮತ್ತು ತೆರಿಗೆ ಪಡೆಯುತ್ತದೆ. ಜನರಲ್ ಸ್ಟಡೀಸ್ ಕಾರ್ಯಕ್ರಮ ಏಳು ತಿಂಗಳ ಅವಯಾಗಿದ್ದರೆ, 250 ಗಂಟೆಗಳ ತರಗತಿಗಳನ್ನು ನಡೆಸಲಾಗುತ್ತದೆ.
ಮೈನ್ಸ್ ಪಾಸಾದವರಿಗೆ ಮುಂದಿನ ಸಂದರ್ಶನಕ್ಕೆ ಮಾರ್ಗದರ್ಶನವನ್ನು ಕೊಡಲಾಗುತ್ತದೆ ಮತ್ತು ನಕಲಿ ಸಂದರ್ಶನ ಮತ್ತು ಇತರ ವಿಶೇಷ ಸೆಷನ್‌ಗಳನ್ನು ನಡೆಸಲಾಗುತ್ತದೆ. ಪ್ರಿಲಿಮ್ಸ್ ಅನ್ನು ಸಂಕಲ್ಪ್‌ಅಡಿ ಕಲಿತರೆ ಮೈನ್ಸ್ ಕಲಿಯಲು ಅಲ್ಲೇ ಸೇರಬೇಕೆಂದೇನಿಲ್ಲ. ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮಕ್ಕಾಗಿ ಸೇರಿದವರು ಸಂಸ್ಥೆಗೆ ರೂ. 800 ಶುಲ್ಕ ಕಟ್ಟಬೇಕು. ಸಂಕಲ್ಪಈ ವರ್ಷ ಗಮನ ಸೆಳೆಯಲು ಕಾರಣ ಟಾಪ್ ಸ್ಥಾನ ಪಡೆದಿರುವ ಮತ್ತು ದ್ವಿತೀಯ ಸ್ಥಾನ ಪಡೆದಿರುವ ಅಭ್ಯರ್ಥಿಗಳಾದ ಕ್ರಮವಾಗಿ ಟೀನಾ ದಬಿ ಮತ್ತು ಅನಂತನಾಗ್ ಮೂಲದ ಅಥರ್ ಅಮೀರ್ ಅವರನ್ನು ಇದೇ ಸಂಸ್ಥೆ ಸಂದರ್ಶನಕ್ಕಾಗಿ ತರಬೇತಿ ನೀಡಿದೆ. ದಬಿ ಮೊದಲಿಗೆ ರೌನ ಐಎಎಸ್ ಸ್ಟಡಿ ಸರ್ಕಲ್ ಅಲ್ಲಿ ಪ್ರಿಲಿಮ್ಸ್ ಮತ್ತು ಮೈನ್ಸ್ ತರಬೇತಿ ಪಡೆದಿದ್ದರು.
ಸಂಕಲ್ಪ್, ಸಣ್ಣ ಸಂಘ ಪ್ರೇರಿತ ಸಂಸ್ಥೆಯಿಂದ ತನ್ನದೇ ಕಟ್ಟಡ ಹೊಂದಿರುವ ಮತ್ತು ದಿಲ್ಲಿಯಲ್ಲಿ ಹಲವು ಕೇಂದ್ರಗಳನ್ನು ಸ್ಥಾಪಿಸಿದ ಮತ್ತು ಕೊಯಂಬತ್ತೂರು, ಗುವಾಹತಿ, ಭೋಪಾಲ್, ರಾಂಚಿ, ಲುಯಾನ ಮತ್ತು ಹರಿದ್ವಾರ ಮೊದಲಾದ ಹೊರಗಿನ ಶಾಖೆಗಳನ್ನೂ ಹೊಂದಿರುವ ದೈತ್ಯ ಸಂಸ್ಥೆಯಾಗಿ ಬೆಳೆದಿದೆ. 1990ರಲ್ಲಿ ಪಿವಿ ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಬಿಜೆಪಿ ಚಿಂತಕರ ಚಾವಡಿ ಜೊತೆಗೆ ಸಂಕಲ್ಪ್‌ಸದಸ್ಯರ ಚರ್ಚೆಗಳಾಗಿದ್ದವು. ಬಿಜೆಪಿಯ ಒಂದು ಗುಂಪು ಮತ್ತು ಪಕ್ಷದ ನಾಯಕರಲ್ಲಿ ಭವಿಷ್ಯದಲ್ಲಿ ತಾವು ಆಡಳಿತದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ ಎನ್ನುವುದು ಮನದಟ್ಟಾಗಿತ್ತು. ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಬೃಜೇಶ್ ಮಿಶ್ರಾ ಈ ನಂಬಿಕೆ ಇಟ್ಟ ಗುಂಪಿನ ಮುಖ್ಯ ಸದಸ್ಯರು. ಅವರಲ್ಲಿ ಮಾಜಿ ಮಿಜೋರಾಂ ರಾಜ್ಯಪಾಲ ಎಆರ್ ಕೊಹ್ಲಿ (ನಳಿನ್ ಕೊಹ್ಲಿ ತಂದೆ) ಕೂಡ ಸೇರಿದ್ದರು. ಒಂದು ಕಾಲದಲ್ಲಿ ಬಿಜೆಪಿ ಅಕಾರಕ್ಕೆ ಬಂದಾಗ ಅದರ ಬಳಿ ಸೀಟುಗಳು ಇರುತ್ತವೆಯೇ ವಿನಃ ಆಡಳಿತಶಾಹಿಯಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ ಎಂದು ಕೊಹ್ಲಿ ಹೇಳಿದ್ದರು. ಆಡಳಿತಶಾಹಿಯಲ್ಲಿ ಪೂರ್ಣವಾಗಿ ಬೇರೆಯವರೇ ತುಂಬಿರುತ್ತಾರೆ ಎಂದು ನಾನು ವಾದಿಸಿದ್ದೆ ಎನ್ನುತ್ತಾರೆ ಕೊಹ್ಲಿ.
ಜೆಎನ್‌ಯು ರೀತಿಯ ಕ್ರಾಂತಿಕಾರಿಗಳು ಮತ್ತು ಇತರ ಸಮಾಜವಾದಿ ಮನಸ್ಥಿತಿಯ ಜನರು ತುಂಬಿರುತ್ತಾರೆ. ಆಡಳಿತಶಾಹಿಯನ್ನು ಬದಲಿಸದೆ ಇದ್ದಲ್ಲಿ ರಾಷ್ಟ್ರೀಯ ಸಂವೇದನೆಯು ಸಂಘದ ವಿರುದ್ಧವೇ ಇರುತ್ತದೆ. ‘‘ನಾವು ಐಎಎಸ್ ತರಬೇತಿ ಶಿಬಿರವೊಂದನ್ನು ಆರಂಭಿಸಬೇಕು ಎಂದೂ ನಾನು ಸಲಹೆ ನೀಡಿದ್ದೆ. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿಲ್ಲ’’ ಎನ್ನುತ್ತಾರೆ ಕೊಹ್ಲಿ. ಸಂಕಲ್ಪ್‌ಅನ್ನು ಆಗ ಆರೆಸ್ಸೆಸ್ ಕಾರ್ಯಕರ್ತ ಸಂತೋಷ್ ತನೇಜ ಆರಂಭಿಸಿದ್ದರು ಮತ್ತು ಕೊಹ್ಲಿ ಜೊತೆ ನಡೆದ ಅಕೃತವಲ್ಲದ ಸಭೆಯೊಂದರ ನಂತರ ತನೇಜ ಅವರಿಗೆ ಕೊಹ್ಲಿಯ ವಾದದಲ್ಲಿ ಸತ್ಯವಿರುವುದು ಕಂಡಿತ್ತು. ಕೂಡಲೇ ಅವರು ತರಗತಿಗಳನ್ನು ಆರಂಭಿಸಿದರು ಮತ್ತು ನಕಲಿ ಸಂದರ್ಶನದ ತರಬೇತಿ ಮತ್ತು ಇತರ ಅಗತ್ಯ ಸೆಷನ್ ಗಳನ್ನು ಐಎಎಸ್ ಅಭ್ಯರ್ಥಿಗಳಿಗೆ ನಡೆಸಲಾರಂಭಿಸಿದರು. ಈ ಕೆಲಸಕ್ಕೆ ಆರೆಸ್ಸೆಸ್ ಕಾರ್ಯಕಾರಿಯೂ ಬೆಂಬಲಿಸಿತು. ತಾತ್ವಿಕ ಬೆಂಬಲ ಅವರಿಂದ ಸಿಕ್ಕಿತು. ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಕೊಂಡಿಯಾಗಿದ್ದ ಒಂದು ಬಾರಿಯ ಜಂಟಿ ಕಾರ್ಯದರ್ಶಿ ಮದನ್ ದಾಸ್ ದೇವಿರನ್ನು ಸೇರಿಸಿಕೊಂಡರು. ಆರೆಸ್ಸೆಸ್‌ನ ಬೌದ್ಧಿಕ್ ಪ್ರಮುಖ ಎಂಜಿ ವೈದ್ಯ ಮತ್ತು ಮತ್ತೊಬ್ಬ ಆರೆಸ್ಸೆಸ್ ನಾಯಕ ಧರ್ಮೇಂದ್ರ ಗುಪ್ತಾ ಇದರಲ್ಲಿ ಜೊತೆಯಾದರು. ಬಿಜೆಪಿಯ ನಿಲುವನ್ನು 1990ರಲ್ಲಿ ಜಾಗತೀಕರಣದ ಕುರಿತು ಭದ್ರಪಡಿಸಿದ ಬಿಜೆಪಿ ಚಿಂತಕರ ಚಾವಡಿಯ ಹಳೇ ಸದಸ್ಯ ಜಗದೀಶ್ ಶೆಟ್ಟಿಗಾರ್, ಆರಂಭಿಕ ಹಂತದಲ್ಲಿ 1990ರಲ್ಲಿ ಸ್ಡೆನ್‌ಗಳನ್ನು ನಡೆಸಿದರು. ಆಗ ದಿಲ್ಲಿಯ ಪಹಾರ್‌ಗಂಜ್ ಪ್ರಾಂತದಲ್ಲಿ ಸಂಸ್ಥೆ ನಡೆಯುತ್ತಿತ್ತು.
1996ರಲ್ಲಿ ಮೊದಲ ಬ್ಯಾಚ್‌ನಲ್ಲಿ 26 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿ, 14 ಮಂದಿ ನಾಗರಿಕ ಸೇವೆಗೆ ಆಯ್ಕೆಯಾದರು. ಯಾರೂ ಐಎಎಸ್ ಪಾಸಾಗದೆ ಇದ್ದರೂ ಐಪಿಎಸ್ ಮತ್ತು ಕೇಂದ್ರೀಯ ಸೇವೆಗೆ ಸೇರಿದರು. ಮುಂದಿನ ವರ್ಷ ಸಂಕಲ್ಪ್ ಐಎಎಸ್ ತಡೆಯನ್ನೂ ಮುರಿದರು. 13 ಮಂದಿ ಐಎಎಸ್‌ಗೆ ಆಯ್ಕೆಯಾದರು. 84 ಮಂದಿ ಆ ವರ್ಷ ತರಬೇತಿ ಪಡೆದರೆ 59 ಮಂದಿ ವಿಭಿನ್ನ ಸೇವೆಗಳಿಗೆ ಸೇರಿದರು. ಸಂಕಲ್ಪ್‌ನಲ್ಲಿ ಪ್ರತೀ ವರ್ಷ ಕಲಿಯುವವರ ಸಂಖ್ಯೆ ಏರುತ್ತಲೇ ಹೋಯಿತು. 1999-2000 ನಡುವೆ 100 ಕ್ಕೂ ಅಕ ಮಂದಿ ಸಂದರ್ಶನ ತರಬೇತಿಗೆ ಸೇರಿದರು ಮತ್ತು ಶೇ. 90ರಷ್ಟು ಮಂದಿ ನಾಗರಿಕ ಸೇವೆಗೆ ಸೇರಿದರು. ಇತ್ತೀಚೆಗಿನ ವರ್ಷಗಳಲ್ಲಿ ಸಂಕಲ್ಪ್‌ವ್ಯಾಪಕ ಹೆಜ್ಜೆ ಇಡುತ್ತಿದೆ. ಅದರ ಯಶಸ್ಸಿನ ಗತಿ ಇಳಿದಿದೆಯಾದರೂ ಈ ವರ್ಷದ ಲಿತಾಂಶ ನೋಡಿದಲ್ಲಿ ದೇಶದಲ್ಲಿ ನಾಗರಿಕ ಸೇವೆಯ ಟಾಪ್ ತರಬೇತಿ ಸಂಸ್ಥೆಯಾಗಿದೆ. ಸಂಕಲ್ಪ್ ಸೇರುವ ಅಭ್ಯರ್ಥಿಗಳು ಆರೆಸ್ಸೆಸ್ ಅಥವಾ ಅದರ ಸಂಸ್ಥೆಗಳನ್ನು ಬೆಂಬಲಿಸ ಬೇಕಾಗಿಲ್ಲ. ಆದರೆ ಆರೆಸ್ಸೆಸ್ ನಾಯಕರ ಜೊತೆಗೆ ಅವರ ಸಂಪರ್ಕ ಮತ್ತು ಸಂಘದ ಕಡೆಗೆ ವಾಲಿದ ನಿವೃತ್ತ ಆಡಳಿತಗಾರರು ಅವರ ಜೊತೆ ಜೀವಿತಾವ ಸಂಬಂಧ ಸೃಷ್ಟಿಸಿಕೊಂಡು ಅವರ ಚಿಂತನೆಗಳ ಮೇಲೆ ಪ್ರಭಾವ ಬೀರುತ್ತಾರೆ. ಗುರುಗಳು, ಸಲಹೆಗಾರರು, ಸಿಬ್ಬಂದಿ ಮತ್ತು ಕಾರ್ಯಕಾರಿ ಸಮಿತಿಯ ತಂಡ ಅಕ್ಷರಶಃ ದೊಡ್ಡ ಪಟ್ಟಿಯನ್ನೇ ಹೊಂದಿದೆ. ಸಂಕಲ್ಪ್‌ಬಗ್ಗೆ ವಿಶ್ಲೇಷಣೆ ಮಾಡುವಾಗ ಇದನ್ನು ಗಮನಿಸಲೇಬೇಕು. ಇದರ ಕಚೇರಿ ಮತ್ತು ಕ್ಯಾಂಪಸ್‌ಗೆ ಸರಕಾರಿ ಜಮೀನು ಕೊಡಲಾಗಿದೆ. ಈ ಘಟ್ಟದಲ್ಲೂ ಸಂಘಟನೆಯ ಸೇವಾ ಮನೋಭಾವ ನೋಡಿದಾಗ ಅದನ್ನು ವಿರೋಸುವುದು ಕಷ್ಟವಾಗುತ್ತದೆ.
ಇತರ ರಾಜಕೀಯ ಪಡೆಗಳು ಈ ಪ್ರಮುಖ ಜಾಗವನ್ನು ಪೂರ್ಣವಾಗಿ ವಾಣಿಜ್ಯ ಸಂಸ್ಥೆಗಳಿಗಾಗಿ ಬಿಟ್ಟುಕೊಟ್ಟರೆ ಸಂಘ ಅತೀ ಸೂಕ್ಷ್ಮವಾಗಿ ಜಾಗವನ್ನು ಆಕ್ರಮಿಸಿಕೊಂಡಿದೆ. ಅದೂ ವ್ಯಾಪಕ ಜಾಗವನ್ನು ಆಕ್ರಮಿಸಿಕೊಂಡು ನಾಗರಿಕ ಸೇವಾ ಅಭ್ಯರ್ಥಿಗಳು ಸೇವೆಗೆ ಅರ್ಹತೆ ಪಡೆಯುವ ಮೊದಲೇ ಅವರನ್ನು ಪ್ರಚೋದಿಸುತ್ತಿದೆ. ವಿಭಿನ್ನ ನಾಗರಿಕ ಸೇವೆಗಳ ನೂರಾರು ವೃತ್ತಿಯ ಮಧ್ಯಭಾಗದಲ್ಲಿರುವ ಅಕಾರಿಗಳು ರಾಷ್ಟ್ರ ನಿರ್ಮಾಣದ ಹೆಸರಿನಲ್ಲಿ ಆರೆಸ್ಸೆಸ್ ಜ್ಞಾನವನ್ನು ಅರೆದು ಕುಡಿದಿರುವುದು ಸುಳ್ಳಲ್ಲ.
ಕೃಪೆ: dailyo.in