ಹೈಮಾಸ್ಟ್ ದೀಪ ಉದ್ಘಾಟನೆ ಎಂದು?
Update: 2016-06-23 23:46 IST
ಮಾನ್ಯರೆ,
ರಾಷ್ಟ್ರೀಯ ಹೆದ್ದಾರಿಯ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಸೂರಿಕುಮೇರು ಎಂಬಲ್ಲಿ ಇಲ್ಲಿನ ನಾಗರಿಕರ ಬಹುಕಾಲದ ಬೇಡಿಕೆಯಾದ ಹೈಮಾಸ್ಟ್ ದೀಪ ಅಳವಡಿಕೆಯಾಗಿ ಎರಡು ತಿಂಗಳು ಕಳೆದರೂ ಉದ್ಘಾಟನೆಗೊಂಡಿಲ್ಲ. ಹೀಗಾಗಿ ಹೈಮಾಸ್ಟ್ ದೀಪವೇ ಕತ್ತಲಲ್ಲಿ ದಿನದೂಡುತ್ತಿದೆೆ. ಮಳೆಗಾಲದಲ್ಲಾದರೂ ಸೂರಿಕುಮೇರು ಬೆಳಕು ಕಾಣಲಿ ಎಂದು ಆಶಿಸಿದ್ದ ಜನತೆಗೆ ಈ ದೀಪ ಉದ್ಘಾಟನೆಯಾಗದ ಕಾರಣ ನಿರಾಸೆಯಾಗಿದೆ.
ಪಂಚಾಯತ್‌ನ ಈ ವಿಳಂಬ ನೀತಿಯಿಂದ ದೀಪಕ್ಕೆ ಎಂದು ಬೆಳಗುವ ಭಾಗ್ಯ ಬರುವುದೋ ಎಂದು ಜನತೆ ಕಾಯುವಂತಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕತ್ತಲಲ್ಲಿರುವ ಸೂರಿಕುಮೇರು ಪೇಟೆಯನ್ನು ಈ ಹೈಮಾಸ್ಟ್ ದೀಪವನ್ನು ಉದ್ಘಾಟನೆ ಮಾಡುವ ಮೂಲಕ ಬೆಳಗಿಸಲಿ.