ಪಕ್ಷವಾತದ ಪತಿಯ ಉಪಚಾರಕ್ಕೆಂದೇ ವಿಚ್ಛೇದನ ಕೊಟ್ಟು ಮರುಮದುವೆಯಾದ ಮಹಿಳೆ!
ಚೀನಾ, ಜೂನ್ 24: ಪಕ್ಷವಾತ ಹಿಡಿದು ಮಲಗಿದ ಪತಿ ಸು ಸಿಹಾನ್‌ಗೆ ಪತ್ನಿ ಸಿ ಸ್ಪಿಂಗ್ ವಿಚ್ಛೇದನ ನೀಡಿದಾಗ ಈ ಪತ್ನಿ ಎಷ್ಟು ಕ್ರೂರಿ ಎಂದು ಹೇಳಿದವರು ಹೆಚ್ಚು ಮಂದಿ. ಆದರೆ ಮಂಚದಿಂದ ಏಳಲಾಗದ ಪತಿಯ ಚಿಕಿತ್ಸೆಗೆ ಆಕೆ ಕಂಡು ಹಿಡಿದ ಸುಲಭದುಪಾಯ ಅದು. ತನ್ನ ಹೊಸ ಪತಿಯ ಸಹಾಯದಿಂದ ಮಾಜಿ ಪತಿಯನ್ನು ಆಕೆ ಉಪಚರಿಸುವುದು ಈ ಮಹಿಳೆಯ ತಂತ್ರವಾಗಿತ್ತು.
2002ರಲ್ಲಿ ನಡೆದ ಗಣಿ ಅವಘಡದಿಂದಾಗಿ ಸಿಹಾನ್ ಪಕ್ಷವಾತಕ್ಕೆ ತುತ್ತಾದರು. ಆನಂತರ ಮಲಗಿದ್ದಲ್ಲೇ ಆದರು.
1996ರಲ್ಲಿ ಸಿಹಾನ್ ಮತ್ತು ಸ್ಪಿಂಗ್ ವಿವಾಹವಾಗಿದ್ದರು. ನಂತರ ಅವರಿಗೆ ಒಂದು ಗಂಡು ಮಗುವಾಯಿತು. ನೈಹಾನ್ ಪ್ರಾಂತದ ಒಂದು ಗಣಿಯಲ್ಲಿ ಸಿಹಾನ್ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರ ಮೇಲೆ ಒಂದು ಬೌಲ್ಡರ್ ಬಿದ್ದಿತ್ತು. ನಷ್ಟ ಪರಿಹಾರವಾಗಿ ಸಿಹಾನ್ರಿಗೆ 40,000 ಯುವಾನ್ ಅಥವ 4137 ಪೌಂಡ್ ಲಭಿಸಿದರೂ ನಂತರ ಈತಪಕ್ಷವಾತದಿಂದ ಸುಧಾರಿಸಿಕೊಂಡಿರಲಿಲ್ಲ. ಪತ್ನಿ ಆತನಹತ್ತಿರ ಉಪಚರಿಸುತ್ತಾ ಇದ್ದರೂ ಹೆಚ್ಚು ವಿಳಂಬವಿಲ್ಲದೆ ತೊರೆದು ಹೋಗಬಹುದು ಎಂದು ಸಿಹಾನ್ ಗೆ ಹೇಳಿದ್ದರು.
ಆದರೆ ಆತನನ್ನು ತೊರೆದು ಪತ್ನಿ ಸ್ಪಿಂಗ್ ಮತ್ತು ಮಕ್ಕಳು ಹೋಗಿರಲಿಲ್ಲ. ಆದರೆ ತನಗೆ ವಿಚ್ಛೇದನ ನೀಡಿ ಬೇರೊಬ್ಬನೊಂದಿಗೆ ಸಂತೋಷದಲ್ಲಿ ಬದುಕಲು ಸಿಹಾನ್ ಪತ್ನಿಗೆ ಉಪದೇಶಿಸಿದ್ದರು. ನಂತರ ಸಿ ಸ್ಪಿಂಗ್ ಸಿಹಾನ್‌ಗೆ ವಿಚ್ಛೇದನ ನೀಡಿ ತನ್ನ ಸಹವರ್ತಿಯಾದ ಲಿಯುವನ್ನು ವಿವಾಹವಾಗಿದ್ದಾಳೆ. 2012ರಲ್ಲಿ ಈ ದಾಂಪತ್ಯದಲ್ಲಿ ಒಬ್ಬ ಮಗ ಜನಿಸಿದ್ದು ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.