ಇಯು ನಿಂದ ಬ್ರಿಟನ್ ಔಟ್ : ಭಾರತಕ್ಕೆ ಮೊದಲ ಶಾಕ್
Update: 2016-06-24 12:32 IST
ಮುಂಬೈ, ಜೂ. 24 : ಯುರೋಪಿಯನ್ ಯೂನಿಯನ್ ನಿಂದ ಹೊರಹೋಗುವ ಬ್ರಿಟನ್ ನಿರ್ಧಾರ ಭಾರತಕ್ಕೆ ಮೊದಲ ದೊಡ್ಡ ಶಾಕ್ ನೀಡಿದೆ. ಶುಕ್ರವಾರ ಬೆಳಗ್ಗೆ ಇಂಗ್ಲೆಂಡ್ ನ ಜನಮತಗಣನೆಯ ಫಲಿತಾಂಶ ಹೊರಬರುತ್ತಲೇ ಕೆಲವೇ ನಿಮಿಷಗಳಲ್ಲಿ ಭಾರತೀಯ ಸ್ಟಾಕ್ ಮಾರುಕಟ್ಟೆಯಿಂದ ಹೂಡಿಕೆದಾರರ ಸುಮಾರು 4 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಒಟ್ಟು ಹೂಡಿಕೆ ಮೊತ್ತ ಗುರುವಾರದ 101.4 ಲಕ್ಷ ಕೋಟಿಯಿಂದ ಇಳಿದು 98 ಲಕ್ಷ ಕೋಟಿ ರೂಪಾಯಿ ಮಟ್ಟಕ್ಕಿಂತಲೂ ಕೆಳಗೆ ಬಂದಿದೆ.